ರಾಜ್ಯದಲ್ಲಿ ವಸತಿ ಯೋಜನೆಯ ಅಡಿಯಲ್ಲಿ ಮನೆ ಹಂಚಿಕೆ ಸಂಬಂಧ ಲಂಚದ ಆರೋಪಗಳು ಹೊರ ಹೊಮ್ಮಿದ ಬೆನ್ನಲ್ಲೇ, ಇತ್ತೀಚೆಗೆ ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಒಂದು ವಿವಾದಾತ್ಮಕ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ಮಂಡ್ಯದ ಮಹದೇವಪುರ ಗ್ರಾಮದಲ್ಲಿ ಸಾರ್ವಜನಿಕ ಸಭೆ ವೇಳೆ ಮಾತನಾಡಿದ ಶಾಸಕರು, ಸರ್ಕಾರಿ ಜಮೀನು ಮೇಲೆ ಬಗರ್ ಹುಕ್ಕುಂ ಅರ್ಜಿ ಹಾಕಿ ಸುಳ್ಳು ದಾಖಲಾತಿಗಳ ಮೂಲಕ ಖಾತೆ ಮಾಡಿಸಲು ಪ್ರಯತ್ನ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಜಮೀನು ಸಾಬ್ರ ಹೆಸರಿಗೆ ಖಾತೆ ಮಾಡಿದ್ರೆ, ಅಂಥವರನ್ನು ನೇಣಿಗೆ ಹಾಕಿ ಬಿಡ್ತೀವಿ! ಅಧಿಕಾರಿಗಳು ಎಚ್ಚರವಾಗಿರಲಿ. ಸುಳ್ಳು ದಾಖಲೆ ಮೂಲಕ ಖಾತೆ ಮಾಡಿದ್ರೆ ಬಿಡಲ್ಲ ಎಂದು ಶಾಸಕರು ಖಡಕ್ ಎಚ್ಚರಿಕೆ ನೀಡಿದರು.
ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಬೆಂಬಲ ಹಾಗೂ ವಿರೋಧ ಎರಡನ್ನೂ ಗಳಿಸುತ್ತಿದೆ.