ರುಚಿಯ ಜೊತೆಗೆ ಆರೋಗ್ಯವೂ ಮುಖ್ಯ : Healthy Food Recipies
ಈ ರೀತಿ ಆರೋಗ್ಯಕರ ನಿಂಬೆ ಹಣ್ಣಿನ ಉಪ್ಪಿನಕಾಯಿ ತಯಾರಿಸಿ..!
ನಿಂಬೆಹಣ್ಣುಗಳನ್ನು ತೊಳೆದು ಒಣಗಿಸಿ ಮತ್ತು ಸಣ್ಣ ತುಂಡುಗಳಾಗಿ ಕತ್ತರಿಸಿ. ಅವುಗಳನ್ನು ಶುದ್ಧ ಬಟ್ಟಲಿನಲ್ಲಿ ಅಥವಾ ಪಾತ್ರೆಯಲ್ಲಿ ಇರಿಸಿ ಮತ್ತು ಉಪ್ಪು ಸೇರಿಸಿ ಅರಿಶಿಣ ಹಾಕಿ ಮಿಕ್ಸ್ ಮಾಡಿ ಬಿಡಿ. ಬಾಣಲೆಯಲ್ಲಿ ಒಣ ಮೆಂತ್ಯ ಮತ್ತು ಕೆಂಪು ಮೆಣಸಿನಕಾಯಿಯನ್ನು ಒಂದೊಂದಾಗಿ ಹುರಿದುಕೊಳ್ಳಿ. ನಿಮಗೆ ಎಷ್ಟು ಪ್ರಮಾಣ ಖಾರ ಬೇಕೋ ಅದನ್ನ ನೋಡಿಕೊಂಡು ಮೆಣಸಿನಕಾಯಿ ತೆಗೆದುಕೊಳ್ಳಿ.
ನಂತರ ಅದನ್ನ ಮಿಕ್ಸಿ ಜಾರ್ ಗೆ ಹಾಕಿಕೊಳ್ಳಿ ಮತ್ತು ನುಣ್ಣಗೆ ಪುಡಿಮಾಡಿ. ಈ ಪುಡಿಯನ್ನು ಹೆಚ್ಚಿ ಉಪ್ಪು ಅರಿಶಿಣ ಸೇರಿಸಿಟ್ಟಿದ್ದ ನಿಂಬೆ ಹಣ್ಣಿಗೆ ಹಾಕಿ ಮಿಕ್ಸ್ ಮಾಡಿ.. ಚಿಕ್ಕ ಬಾಣಲೆಯಲ್ಲಿ ಎಳ್ಳೆಣ್ಣೆ ಹಾಕಿ ಸಾಸಿವೆ ಮತ್ತು ಇಂಗು ಹಾಕಿ. ಸಾಸಿವೆ ಕಾಳು ಸಿಡಿದಾಗ ಉರಿಯನ್ನು ಆಫ್ ಮಾಡಿ. ನಿಂಬೆ ಮಿಶ್ರಣಕ್ಕೆ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ ಮಾಡಿ.. ಬಳಿಕ ಒಂದು ಶುದ್ಧವಾದ ಕಂಟೇನರ್ ನಲ್ಲಿ ಮಿಶ್ರಣವನ್ನ ಹಾಕಿ ಗಟ್ಟಿಯಾಗಿ ಮುಚ್ಚಿ ರೂಮ್ ಟೆಂಪರೇಚರ್ ನಲ್ಲಿ ಇಡಿ.. ಕನಿಷ್ಠ ಇದನ್ನ ತಯಾರಿಸಿದ 2 ದಿನಗಳನ್ನ ಬಿಡಿ.. ಆ ನಂತರ ಅದು ಸೇವಿಸಲು ಸರಿಯಾಗಿರುತ್ತದೆ..
ಪುದಿನಾ ಜ್ಯೂಸ್
ಬೇಕಾಗುವ ಸಾಮಾಗ್ರಿಗಳು
ಪುದಿನಾ – 1 ಕಟ್ಟು
ಶುಂಠಿ – ಸ್ವಲ್ಪ
ಸಕ್ಕರೆ – 1 ಬಟ್ಟಲು
ನಿಂಬೆರಸ – 2 ಚಮಚ
ಏಲಕ್ಕಿ ಪುಡಿ – ಸ್ವಲ್ಪ
ಉಪ್ಪು – ಚಿಟಿಕೆ
ನೀರು
ಮಾಡುವ ವಿಧಾನ
ಪುದಿನಾ ಎಲೆಗಳನ್ನು ಸ್ವಚ್ಛಗೊಳಿಸಿ, ಅದನ್ನು ಮತ್ತು ಶುಂಠಿಯನ್ನು ಮಿಕ್ಸಿಯಲ್ಲಿ ಹಾಕಿ ನೀರು ಸೇರಿಸಿ ಚೆನ್ನಾಗಿ ರುಬ್ಬಿ.
ನಂತರ ಸೋಸಿ, ಅದಕ್ಕೆ ಸಕ್ಕರೆ, ನಿಂಬೆರಸ, ಏಲಕ್ಕಿ, ಉಪ್ಪು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
ಇದು ಕುಡಿಯಲು ಚೆನ್ನಾಗಿರುತ್ತದೆ ಮತ್ತು ಜೀರ್ಣಕಾರಿ ಕೂಡ ಆಗಿದೆ.
ಗಾರ್ಲಿಕ್ ಬ್ರೆಡ್ ಪಿಜ್ಜಾ
ಗಾರ್ಲಿಕ್ ಬ್ರೆಡ್ ಪಿಜ್ಜಾ
ಬೇಕಾಗುವ ಪದಾರ್ಥಗಳು
ಗಾರ್ಲಿಕ್ ಬ್ರೆಡ್ 1 ಪೌಂಡ್
ಸ್ವೀಟ್ ಕಾರ್ನ್ 1
ಕ್ಯಾಪ್ಸಿಕಂ 2
ಈರುಳ್ಳಿ 2
ಟೊಮೆಟೊ 2
ಟೊಮೆಟೊ ಸಾಸ್ ಅಗತ್ಯವಿರುವಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಪೆಪ್ಪರ್ ಅಗತ್ಯವಿರುವಷ್ಟು
ಬೆಣ್ಣೆ ಅಗತ್ಯವಿರುವಷ್ಟು
ತುರಿದ ಚೀಸ್
ಮಾಡುವ ವಿಧಾನ
ಕಡಾಯಿಯನ್ನು ಬಿಸಿ ಮಾಡಿ ಬೆಣ್ಣೆಯನ್ನು ಸೇರಿಸಿ. ಅದಕ್ಕೆ
ಕತ್ತರಿಸಿದ ಕ್ಯಾಪ್ಸಿಕಂ ಈರುಳ್ಳಿ ಸೇರಿಸಿ ಹುರಿಯಿರಿ. ಕಾರ್ನ್ ಸೇರಿಸಿ ಹುರಿಯಿರಿ.
ಸ್ವಲ್ಪ ಉಪ್ಪು ಸೇರಿಸಿ. ಗಾರ್ಲಿಕ್ ಬ್ರೆಡ್ ತುಂಡು ತೆಗೆದುಕೊಳ್ಳಿ ಅದರ ಮೇಲೆ ಟೊಮೆಟೊ ಸಾಸ್ ಹರಡಿ. ನಂತರ ಅದರ ಮೇಲೆ ಉಪ್ಪು ಪೆಪ್ಪರ್ ಸಿಂಪಡಿಸಿ. ಅದರ ಮೇಲೆ ಹುರಿದ ತರಕಾರಿ ಮಿಶ್ರಣವನ್ನು ಸೇರಿಸಿ. ನಂತರ ಟೊಮೆಟೊ ಅದರ ಮೇಲೆ ತುರಿದ ಚೀಸ್ ಇಡಿ.
ಬಳಿಕ ತವಾವನ್ನು ಬಿಸಿ ಮಾಡಿ, ಬೆಣ್ಣೆ ಸೇರಿಸಿ.. ಬ್ರೆಡ್ ತುಂಡುಗಳನ್ನು ಇರಿಸಿ … ಮುಚ್ಚಳವನ್ನು ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ ಚೀಸ್ ಕರಗುವ ತನಕ ಹುರಿಯಿರಿ. ರುಚಿಯಾದ ಗಾರ್ಲಿಕ್ ಪಿಜ್ಜಾ ಸವಿಯಿರಿ.
ಸುಲಭವಾಗಿ ಈ ರೀತಿ 10 ನಿಮಿಷದಲ್ಲಿ, ಮಾಡಿ ರುಚಿಕರ ರಸಂ..!
ರುಚಿಕರ ಹಾಗೂ ಸುಲಭವಾಗಿ ರಸಂ ಮಾಡಲು ಹೆಚ್ಚು ಪದಾರ್ಥಗಳ ಅವಶ್ಯಕಥೆ ಇಲ್ಲ… ಇಲ್ಲಿ ಸುಮಾರು 4 ಜನರಿಗೆ ಆಗುವಷ್ಟು ರಸಂ ಮಾಡಲಿಕ್ಕೆ ಬೇಕಾದ ಪದಾರ್ಥಗಳನ್ನ ಕೊಡಲಾಗಿದೆ.
ಅರ್ಧಕಪ್ಪು ಕಾಳು ಮೆಣಸು , ಜೀರಿಗೆ
ಅರ್ಧ ಸ್ಪೂನ್ ಅಡುಗೆ ಅರಿಶಿಣ
ಸಾಸಿವೆ
ರುಚಿಕೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ಬೇಕಾದಷ್ಟು ಎಣ್ಣೆ
3- 4 ಟೊಮ್ಯಾಟೋ
ಬೆಳ್ಳುಳ್ಳಿ – 10-15 ಎಸಳುಗಳು
ಕೊತ್ತಂಬರಿ ಸೊಪ್ಪು
ಉಣಸೆಹುಳಿ ಒಂದು ನಿಂಬೆ ಗಾತ್ರದಷ್ಟು
ಖಾರದ ಒಣ ಮೆಣಸಿನ ಕಾಯಿ – 8 -12
ಮೊದಲಿಗೆ ಒಂದು ದೊಡ್ಡ ಬಟ್ಟಲಲ್ಲಿ ( ಕೈ ಆಡಿಸಲು ಸುಲಭವಾಗಬೇಕು ) ಉಣಸೆಹುಳಿ ನೆನಸಿ. ಮತ್ತೊಂದೆಡೆ ಒಣಮೆಣಸಿನ ಕಾಯಿಗಳನ್ನ ಮುರಿದಿಟ್ಟುಕೊಳ್ಳಿ. ಕೊತ್ತಂಬರಿ ಸೊಬ್ಬನ್ನು ಚೆನ್ನಾಗಿ ತೊಳೆದು ದೊಡ್ಡ ದೊಡ್ಡ ಗಾತ್ರದಲ್ಲೇ ಕಟ್ ಮಾಡಿ.. ನೆನೆಸಿಟ್ಟಿದ್ದ ಉಣಸೆ ಹುಳಿಯನ್ನ ಒಂದು 5 ನಿಮಗಳ ನಂತರ ಚೆನ್ನಾಗಿ ಸ್ವಚ್ಛ ಕೈಗಳಿಂದ ಕಿವುಚಿ. ಆನಂತರ ಅದರಿಂದ ಹುಣಸೆ ನಾರು , ಬೀಜನ್ನ ಬೇರ್ಪಡಿಸಿ ತೆಗೆದುಬಿಡಿ. ನಂತರ ಅದಕ್ಕೆ ಟೊಮ್ಯಾಟೋವನ್ನ 4 – 4 ಕಟ್ ಗಳಾಗಿ ಪೀಸ್ ಮಾಡಿ ಹುಣಸೆ ರಸಕ್ಕೆ ಹಾಕಿ ಅದರೊಟ್ಟಿಗೆ ಕಿವುಚಿ… ಚೆನ್ನಾಗಿ ಕಿವುಚಿದ ನಂತರ ಅದಕ್ಕೆ ಕಟ್ ಮಾಡಿಟ್ಟ ಕೊತ್ತಂಬರಿ ಸೊಪ್ಪನ್ನು ಹಾಕಿ. ಮತ್ತೊಂದೆಡೆ ಬೆಳ್ಳುಳ್ಳಿಯನ್ನ ಸಿಪ್ಪೆ ಸಮೇತ ಜೆಜ್ಜಿ ಇಟ್ಟುಕೊಳ್ಳಿ. ಬಳಿಕ ಜಾರ್ ನಲ್ಲಿ ಹಾಕಿ ಅರ್ಧ ಕಪ್ ಅಷ್ಟು ಜೀರಿಗೆ ಮೆಣಸನ್ನು ರುಬ್ಬಿ ನುಣ್ಣಗೆ ಪುಡಿ ಮಾಡಿ.. ಬಳಿಕ ಅದರಿಂದ ನಿಮಗೆ ಎಷ್ಟು ಪ್ರಮಾಣದಲ್ಲಿ ಖಾರ ಬೇಕೋ ನೋಡಿ ಅದನ್ನ ಕಡಿಮೆ ಹೆಚ್ಚು ಮಾಡಿಕೊಳ್ಳಬಹುದು. ಅರ್ಧ ಕಪ್ ಅಷ್ಟು ಪೂರ್ತಿ ಜೀರಿಗೆ ಮೆಣಸು ಪುಡಿ ಹಾಕಿದ್ರೆ ರುಚಿ ಸರಿಯಾಗಿ ಬರುತ್ತದೆ. ಈ ಪುಡಿಯನ್ನ ಹುಣಸೆ ಟೊಮ್ಯಾಟೋ ಮಿಶ್ರದ ಜೊತೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಒಗ್ಗರಣೆಗೆ ಸಾರು ಮಾಡಬಯಸುವ ಪಾತ್ರೆಯನ್ನ ಗ್ಯಾಸ್ ಮೇಲೆ ಕಾಯಲು ಇಡಿ. ಒಗ್ಗರಣೆಯಾಗುವ ತನಕ ಸಣ್ಣ ಉರಿಯಲ್ಲೇ ಇರಬೇಕು.. ಪಾತ್ರೆ ಕಾಯ್ದ ನಂತರ 4- 5 ಸ್ಪೂನ್ ಎಣ್ಣೆ ಹಾಕಿ. ನಂತರ ಅದಕ್ಕೆ ಸಾಸಿವೆ ಹಾಕಿ. ಸಾಸಿವೆ ಚಿಟ ಪಟ ಸಿಡಿಯುವ ಸಂಪೂರ್ಣವಾಗಿ ನಿಂತ ನಂತರ ಅರಿಶಿಣ ಹಾಕಿ. ನಂತರ ತಕ್ಷಣ ತಕ್ಷಣವೇ ಬೇರೆ ಪದಾರ್ಥ ಸೀಯುವ ಮೊದಲೇ ಕರಿಬೇವು, ಒಣಮೆಣಸಿನ ಕಾಯಿ , ಚೆಟ್ಟಿಟ್ಟ ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.. ಒಗ್ಗರಣೆಯ ಗಮ ಚೆನ್ನಾಗಿ ಬಂದ ತಕ್ಷಣವೇ ಅದಕ್ಕೆ ಹುಣಸೆ ಟಮಾಟೋ ಮಿಶ್ರಣವನ್ನ ಸೇರಿಸಿ. ಈಗ ಹುಣಸೆ ಮಿಶ್ರಣದ 4 -5 ಪಟ್ಟು ನೀರನ್ನ ಪಾತ್ರೆಗೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಈ ಹಂತದಲ್ಲಿ ಬೇಕಿದ್ದರೆ ಧನ್ಯಾ ಪುಡಿ, ಹಾಗೂ ಒಂದು ಸ್ಪೂನ್ ಖಾರದ ಪುಡಿ ಅಥವ ಸಾಂಬರ್ ಪುಡಿ ಹಾಕಬಹುದು. ಆದ್ರೆ ಹಾಕಲೇಬೇಕೆಂದೇನಿಲ್ಲ. ಇದನ್ನ ಚನ್ನಾಗಿ ಕುದಿಯಲು ಬಿಡಿ. ಸುಮಾರು 10 ನಿಮಿಗಳಾದ್ರೂ ರಸಂ ಕುದಿಯಬೇಕು. ಕುದ್ದು ರೆಡಿಯಾದ ನಂತರ ಎಣ್ಣೆ ಮೇಲೆ ಬಂದಿರುತ್ತದೆ. ಆಗ ರಸಂ ರೆಡಿ ಎಂದರ್ಥ.. ಇದನ್ನ ಅನ್ನದ ಜೊತೆಗೆ ಅಷ್ಟೇ ಅಲ್ಲದೇ ಹಾಗೆಯೇ ಸೂಪ್ ರೀತಿಯೂ ಅಥವ ನೆಗಡಿ , ಜ್ವರವಿದ್ದಾಗಲೂ ಹಾಗೆಯೇ ಕುಡಿಯಬಹುದು. ರುಚಿ ಜೊತೆಗೆ ಆರೋಗ್ಯಕರವೂ ಹೌದು.
ನಿಂಬು ಮಸಾಲಾ ಸೋಡಾ
ಬೇಕಾಗುವ ಪದಾರ್ಥಗಳು
3-4 ಕಪ್ ಸೋಡಾ
¼ ಕಪ್ ಸಕ್ಕರೆ
¼ ಕಪ್ ತಾಜಾ ಪುದೀನ ಎಲೆಗಳು
2 ನಿಂಬೆ ರಸ
1 ಟೀಸ್ಪೂನ್ ಜೀರಿಗೆ ಪುಡಿ
¼ ಟೀಸ್ಪೂನ್ ಕರಿಮೆಣಸು ಪುಡಿ
¼ ಚಮಚ ಚಾಟ್ ಮಸಾಲ
½ ಟೀಸ್ಪೂನ್ ಬ್ಲಾಕ್ ಸಾಲ್ಟ್
1 ಟೀಸ್ಪೂನ್ ತುರಿದ ಶುಂಠಿ
2-3 ಪಿಂಚ್ ಉಪ್ಪು
ಐಸ್ ತುಂಡುಗಳು
ಅಲಂಕರಿಸಲು ಕೆಲವು ಪುದೀನ ಎಲೆಗಳು
ಅಲಂಕರಿಸಲು ನಿಂಬೆ ಚೂರುಗಳು
ಮಾಡುವ ವಿಧಾನ
ಮಿಕ್ಸಿ ಜಾರ್ ತೆಗೆದುಕೊಂಡು ಅದರಲ್ಲಿ ಸಕ್ಕರೆ, ತಾಜಾ ಪುದೀನ ಎಲೆಗಳು, ನಿಂಬೆ ರಸ, ಜೀರಿಗೆ ಪುಡಿ, ಕರಿಮೆಣಸು ಪುಡಿ, ಚಾಟ್ ಮಸಾಲ, ಕಪ್ಪು ಉಪ್ಪು, ಉಪ್ಪು, ಶುಂಠಿ ಮತ್ತು ¼ ಕಪ್ ನೀರು ಸೇರಿಸಿ.
ಎಲ್ಲವನ್ನೂ ಚೆನ್ನಾಗಿ ಗ್ರೈಂಡ್ ಮಾಡಿ ಮತ್ತು ನಯವಾದ ಮಿಶ್ರಣವನ್ನು ತಯಾರಿಸಿ.
ಈಗ ಈ ಮಿಶ್ರಣದಿಂದ ರಸವನ್ನು ಸೋಸಿ ತೆಗೆಯಿರಿ.
2-3 ಸರ್ವಿಂಗ್ ಗ್ಲಾಸ್‌ಗಳನ್ನು ತೆಗೆದುಕೊಂಡು, ತಯಾರಾದ ರಸವನ್ನು ಅದಕ್ಕೆ ಸುರಿಯಿರಿ.
ಅದರಲ್ಲಿ ಸ್ವಲ್ಪ ಪುದೀನ ಎಲೆಗಳು, ನಿಂಬೆ ತುಂಡು ಮತ್ತು ಪುಡಿಮಾಡಿದ ಐಸ್ ಅಥವಾ ಐಸ್ ಕ್ಯೂಬ್‌ಗಳನ್ನು ಸೇರಿಸಿ.
ನಂತರ, ಅದರ ಮೇಲೆ ಸೋಡಾವನ್ನು ಸುರಿದು ಕುಡಿಯಲು ಕೊಡಿ.
ಸೌತೆಕಾಯಿ ಜ್ಯೂಸ್
ಬೇಕಾಗುವ ಸಾಮಗ್ರಿಗಳು
ಸೌತೆಕಾಯಿ – 2
ಕಪ್ಪು ಉಪ್ಪು- ಚಿಟಿಕೆಯಷ್ಟು
ಪುದೀನಾ ಎಲೆ – ಸ್ವಲ್ಪ
ಸಕ್ಕರೆ – 5 ಚಮಚ
ನಿಂಬೆಹಣ್ಣು – 1
ನೀರು – ಒಂದು ಕಪ್
ಮಾಡುವ ವಿಧಾನ:
ಮೊದಲಿಗೆ ಸೌತೆಕಾಯಿ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ. ನಂತರ ಇದಕ್ಕೆ ಪುದೀನಾ ಎಲೆ, ಕಪ್ಪು ಉಪ್ಪು, ಸಕ್ಕರೆ, ನಿಂಬೆಹಣ್ಣಿನ ರಸ, ನೀರು ಹಾಕಿ ಗ್ರೈಂಡ್ ಮಾಡಿ. ನಂತರ ಇದನ್ನು ಸೋಸಿ ಗ್ಲಾಸ್ ಗೆ ಹಾಕಿದರೆ ಸೌತೆಕಾಯಿ ಜ್ಯೂಸ್ ಸಿದ್ಧ.
ಹೆಸರು ಬೇಳೆ – ನವಣೆ ಅಕ್ಕಿ ದೋಸೆ
ಬೇಕಾಗುವ ಪದಾರ್ಥಗಳು
ಹೆಸರು ಬೇಳೆ – 3/4 ಕಪ್
ನವಣೆ ಅಕ್ಕಿ – 3/4 ಕಪ್
ಶುಂಠಿ – 1 ಇಂಚು
ಹಸಿರು ಮೆಣಸು – 2
ಜೀರಿಗೆ – 1 ಚಮಚ
ರುಚಿಗೆ ತಕ್ಕಂತೆ ಉಪ್ಪು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ/ತುಪ್ಪ
ಮಾಡುವ ವಿಧಾನ
ಮೊದಲಿಗೆ ಹೆಸರು ಬೇಳೆಯನ್ನು ಮೊಳಕೆ ಬರಿಸಿಕೊಳ್ಳಿ.
ನವಣೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಕನಿಷ್ಠ 2-3 ಗಂಟೆಗಳ ಕಾಲ ನೆನೆಸಿಡಿ. ನಂತರ ನೆನೆದ ನವಣೆ ಅಕ್ಕಿಯನ್ನು ನೀರಿನಿಂದ ಸೋಸಿ. ಮಿಕ್ಸರ್ ಗೆ ನವಣೆ ಅಕ್ಕಿ, ಹೆಸರು ಕಾಳು, ಶುಂಠಿ, ಮೆಣಸಿನಕಾಯಿ, ಜೀರಿಗೆ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ರುಬ್ಬಿ. ನಂತರ 1/2 ಕಪ್ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
ದೋಸೆ ಕಾವಲಿಯನ್ನು ಬಿಸಿ ಮಾಡಿ. ಕಾದಾಗ ಸ್ವಲ್ಪ ಎಣ್ಣೆ/ತುಪ್ಪ ಸವರಿ. ನಂತರ ರುಬ್ಬಿಕೊಂಡ ಹಿಟ್ಟನ್ನು ಕಾವಲಿ ಮೇಲೆ ವೃತ್ತಾಕಾರದಲ್ಲಿ ಹರಡಿ. ಎಣ್ಣೆಯನ್ನು ಚಿಮುಕಿಸಿ, ಎರಡು ಬದಿಗಳನ್ನು ಚೆನ್ನಾಗಿ ಬೇಯಿಸಿ.