ಕೋಲಾರದಲ್ಲಿ ಕೊರೊನಾ ಹೆಮ್ಮಾರಿಗೆ ದಂಪತಿ ಬಲಿ

1 min read
karnataka

ಕೋಲಾರದಲ್ಲಿ ಕೊರೊನಾ ಹೆಮ್ಮಾರಿಗೆ ದಂಪತಿ ಬಲಿ Corona

ಕೋಲಾರ : ಚಿನ್ನದ ನಾಡು ಕೋಲಾರದಲ್ಲಿ ಕೊರೊನಾ ಮರಣಕೇಕೆ ಮುಂದುವರೆದಿದೆ. ಇವತ್ತು ಕೊರೊನಾಗೆ ದಂಪತಿ ಬಲಿಯಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ರಮೇಶ್ (46) ಅನಸೂಯಾ(41)ಮೃತರಾಗಿದ್ದಾರೆ. ರಮೇಶ ಫೋಟೋ ಸ್ಟುಡಿಯೋ ಮಾಲೀಕ ಎಂದು ತಿಳಿದುಬಂದಿದೆ.

Corona

ಕೋವಿಡ್ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇವರು ಮೂರು ದಿನಗಳ ಹಿಂದೆ ಕೊರೊನಾ ಟೆಸ್ಟ್ ಮಾಡಿದ್ದು, ಪಾಸಿಟಿವ್ ಬಂದಿತ್ತು. ಕೂಡಲೇ ಬಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದ್ರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆ ಬಳಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd