ಕುಡಚಿ ಶಾಸಕ ಪಿ.ರಾಜೀವ್ ಅವರಿಗೆ ಕೊರೊನಾ ದೃಢ
ಚಿಕ್ಕೋಡಿ : ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ಅವರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ಸದ್ಯ ಅವರು ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್ ಆಗಿದ್ದಾರೆ. ಈ ಕುರಿತು ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದಾರೆ.
ಟ್ವಿಟ್ಟರ್ ನಲ್ಲಿ ರಾಜೀವ್ ಅವರು, ಇಂದು ನಾನು ಕೋವಿಡ್ ಪರೀಕ್ಷೆಗೊಳಪಟ್ಟಾಗ ಪಾಸಿಟಿವ್ ಎಂದು ತಿಳಿದುಬಂದಿರುತ್ತದೆ.
ವೈದ್ಯರು ಕೊಟ್ಟ ಸಲಹೆ ಹಾಗೂ ಅಗತ್ಯ ಚಿಕಿತ್ಸಾ ಕ್ರಮಗಳೊಂದಿಗೆ ಸ್ವಗೃಹದ ಪ್ರತ್ಯೇಕ ಕೊಠಡಿಯಲ್ಲಿಯೇ ಸ್ವ ಕ್ವಾರಂಟೈನ್ ಗೆ ಒಳಗಾಗಿದ್ದೇನೆ.
ನನ್ನೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಪರೀಕ್ಷಿಸಿಕೊಳ್ಳಲು ವಿಂತಿಸುತ್ತೇನೆ. ಕೋವಿಡ್ ಬಗ್ಗೆ ಭಯ ಬೇಡ.
ಎಚ್ಚರಿಕೆ ಹಾಗೂ ಆತ್ಮವಿಶ್ವಾಸದಿಂದ ಕೊರೊನವನ್ನು ಎದುರಿಸಿ. ಬೇಗನೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳಲು ನಿಸರ್ಗದಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.