ಜನರಿಗೊಂದು ಕಾನೂನು.. ರಾಜಕಾರಣಿಗಳಿಗೊಂದು ಕಾನೂನು..?

1 min read
Corona virus saaksha tv

ಜನರಿಗೊಂದು ಕಾನೂನು.. ರಾಜಕಾರಣಿಗಳಿಗೊಂದು ಕಾನೂನು..? Corona virus saaksha tv

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಜನರಿಗೊಂದು ಕಾನೂನು, ರಾಜಕಾರಣಿಗಳಿಗೊಂದು ಕಾನೂನು ಎಂಬಂತಾಗಿದೆ.

ಕೊರೊನಾ ಆತಂಕ, ನಿಯಮಗಳನ್ನು ಗಾಳಿಗೆ ತೂರಿ ಜನವರಿ 14 ರಂದು ಬಿಜೆಪಿ ನಾಯಕ ಎನ್ ಆರ್ ರಮೇಶ್ ಭರ್ಜರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಚಾಮರಾಜಪೇಟೆಯ ರಾಯಪುರ ವಾರ್ಡ್ ನಲ್ಲಿ ನೂರಾರು ಜನರ ಜೊತೆ ಎನ್ ಆರ್ ರಮೇಶ್ ಮೆರವಣಿಗೆ ಮಾಡಲಾಗಿದೆ.

Corona virus  saaksha tv

ಡೋಲು ತಮಟೆಗಳೊಂದಿಗೆ ಎನ್ ಆರ್ ರಮೇಶ್ ಗೆ ಸ್ವಾಗತ ಕೋರಲಾಗಿದೆ. ಮಾಸ್ಕ್ ಧರಿಸದೆ, ಸಾಮಾಜಿಕ  ಅಂತರವು ಇಲ್ಲದೆ ಜನರು ಗುಂಪುಗೂಡಿದ್ದರು.  

ಮಾಜಿ ಕಾರ್ಪೋರೇಟರ್ ಆಗಿರುವ ಎನ್ ಆರ್ ರಮೇಶ್ ಅವರು ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd