ಪುಣೆ: ಬೈಕ್ ನಲ್ಲಿ ಬಂದು ಪುಣೆ (Pune) ಮಾಜಿ ಕಾರ್ಪೋರೇಟರ್ ವನರಾಜ್ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡ ಅಂದೇಕರ್ ಮೇಲೆ ದಾಳಿ ನಡೆಸಿತ್ತು. ಹರಿತವಾದ ಆಯುಧಗಳಿಂದ ಅಂದೇಕರ್ ಕುತ್ತಿಗೆ ಹಾಗೂ ತಲೆಗೆ ಹಲ್ಲೆ ನಡೆಸಿದ್ದರು. ದಾಳಿಯ ಹಿಂದೆ ಅಂದೇಕರ್ ಸಂಬಂಧಿಕರ ಪಾತ್ರವಿದೆ ಎಂದು ಶಂಕಿಸಲಾಗಿದೆ. ಈ ಕುರಿತು ಎಫ್ ಐಆರ್ (FIR) ದಾಖಲಿಸಲಾಗಿದೆ. ಅಂದೇಕರ್ ದೇಹದಲ್ಲಿ 5 ಬಾರಿ ಗುಂಡು ಹಾರಿಸಿರುವ ಗುರುತು ಹಾಗೂ ಚೂಪಾದ ಶಸ್ತ್ರಗಳಿಂದ ಚುಚ್ಚಿರುವ ಗಾಯಗಳ ಗುರುತುಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.