ಭಾರತೀಯ ಕಂಪನಿಯ ಕೆಮ್ಮಿನ ಸಿರಫ್ ಸೇವಿಸಿ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು…
ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಕೆಂಮ್ಮಿನ ಸಿರಪ್ ಸೇವಿಸಿ ಸಾವನ್ನಪ್ಪಿದ್ದು ವಿಶ್ವ ಆರೋಗ್ಯ ಸಂಸ್ಥೆ ಭಾರತೀಯ ಕಂಪನಿ ತಯಾರಿಸಿದ ನಾಲ್ಕು ಜ್ವರ, ಶೀತ ಮತ್ತು ಕೆಮ್ಮು ಸಿರಪ್‌ಗಳ ಬಗ್ಗೆ ಎಚ್ಚರಿಕೆ ನೀಡಿದೆ, ಅವುಗಳನ್ನು ಬಳಸದಂತೆ ಜನರನ್ನು ಒತ್ತಾಯಿಸಿದೆ.
ಪ್ರೋಮೆಥಾಜಿನ್ ಓರಲ್ ಸೊಲ್ಯೂಷನ್, ಕೋಫೆಕ್ಸ್‌ಮಾಲಿನ್ ಬೇಬಿ ಕೆಮ್ಮಿನ ಸಿರಪ್, ಮಾಕೋಫ್ ಬೇಬಿ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಎಂಬ ನಾಲ್ಕು ಸಿರಪ್ ಗಳನ್ನ ಹರಿಯಾಣ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್‌ನಿಂದ ತಯಾರಿಸಲ್ಪಟ್ಟಿದೆ.
“ನಾಲ್ಕು ಉತ್ಪನ್ನಗಳ ಮಾದರಿಗಳ ಪ್ರಯೋಗಾಲಯ ವಿಶ್ಲೇಷಣೆ ಮಾಡಲಾಗಿದ್ದು, ಅವುಗಳು ಸ್ವೀಕಾರಕ್ಕೆ ಅರ್ಹವಲ್ಲದ ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಮಾಲಿನ್ಯಕಾರಕಗಳನ್ನ ಹೊಂದಿರುತ್ತವೆ ಎಂದು ಖಚಿತಪಡಿಸುತ್ತದೆ. ಇಲ್ಲಿಯವರೆಗೆ, ಈ ನಾಲ್ಕು ಉತ್ಪನ್ನಗಳನ್ನು ಗ್ಯಾಂಬಿಯಾದಲ್ಲಿ ಗುರುತಿಸಲಾಗಿದೆ. ಆದರೆ ಅನೌಪಚಾರಿಕ ಮಾರುಕಟ್ಟೆಗಳ ಮೂಲಕ ಇತರ ದೇಶಗಳು ಅಥವಾ ಪ್ರದೇಶಗಳಿಗೆ ವಿತರಿಸಿರಬಹುದು” ಎಂದು WHO ಎಚ್ಚರಿಕೆಯಲ್ಲಿ ತಿಳಿಸಿದೆ.
ಉತ್ಪನ್ನಗಳ ಎಲ್ಲಾ ಬ್ಯಾಚ್‌ಗಳನ್ನು ಆಯಾ ರಾಷ್ಟ್ರೀಯ ನಿಯಂತ್ರಕ ಅಧಿಕಾರಿಗಳು ವಿಶ್ಲೇಷಿಸುವವರೆಗೆ “ಅಸುರಕ್ಷಿತವೆಂದು ಪರಿಗಣಿಸಬೇಕು” ಎಂದು ಅದು ಹೇಳಿದೆ.
ಮೂಲಗಳ ಪ್ರಕಾರ, ಭಾರತದ ಅಪೆಕ್ಸ್ ಡ್ರಗ್ ರೆಗ್ಯುಲೇಟರಿ ಅಥಾರಿಟಿ – ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) – ಸೆಪ್ಟೆಂಬರ್ 29 ರಂದು ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ ನಂತರ ಈಗಾಗಲೇ ತನಿಖೆಯನ್ನು ಪ್ರಾರಂಭಿಸಿದೆ.
Cough syrups – After death of 66 children in Gambia, WHO warns about four Indian cough syrups