COVID 19 UPDATE | ರಾಜ್ಯದಲ್ಲಿಂದು 25 ಸಾವಿರ ಕೊರೊನಾ ಕೇಸ್ ಪತ್ತೆ covid-19-cases update-in karnataka today
ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆಯ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ಇಂದು 25,005 ಕೊರೊನಾ ಕೇಸ್ ಪತ್ತೆಯಾಗಿವೆ. ಇಂದು ಎಂಟು ಮಂದಿ ಹೆಮ್ಮಾರಿ ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿಂದು 2,363 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದಿನ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಸಕ್ರಿಯ ಕೇಸ್ ಗಳ ಸಂಖ್ಯೆ 1,15,733 ಕ್ಕೆ ಬಂದಿದೆ.
ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 18,374 ಕೊರೊನಾ ಕೇಸ್ ಪತ್ತೆಯಾಗಿವೆ.
ಇಂದು ದಕ್ಷಿಣ ವಲಯ 3,003, ಬೆಂಗಳೂರು ಪೂರ್ವ 2,996, ಮಹದೇವಪುರ 2,181 , ಪಶ್ಚಿಮ 2,110, ಬೊಮ್ಮನಹಳ್ಳಿ ವಲಯದಲ್ಲಿ 2096, ದಾಸರಹಳ್ಳಿ 367, ಆರ್ ಆರ್ನಗರ 1,362, ಯಲಹಂಕ 1,233, ಅನೇಕಲ್ 698, ಬೆಂಗಳೂರು ಹೊರವಲಯ 1,288 ಸೇರಿ ಒಟ್ಟು 18,374 ಕೇಸ್ ಗಳು ಪತ್ತೆಯಾಗಿವೆ.