covid 19 cases update : ಇಂದು ದೇಶದಲ್ಲಿ 2,47,417 ಮಂದಿಗೆ ಸೋಂಕು covid cases in india in last 24 hours today saaksha tv
ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕಿನ ರಣಕೇಕೆ ಮುಂದುವರೆದಿದ್ದು, ಇಂದು ದೇಶದಲ್ಲಿ ಹೊಸದಾಗಿ 2,47,417 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ.
ಹಿಂದಿನ ದಿನಕ್ಕೆ ಹೋಲಿಸಿದರೆ ಸೋಂಕು ಪ್ರಮಾಣ ಶೇಕಡಾ 27ರಷ್ಟು ಹೆಚ್ಚಾಗಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 11,17,531ಕ್ಕೆ ಏರಿಕೆಯಾಗಿದೆ.
ನಿನ್ನೆ ದೇಶದಾದ್ಯಂತ 84,825 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾ ಸೋಂಕು ಜೊತೆ ಜೊತೆಗೆ ದೇಶದಲ್ಲಿ ಮಾಯಾವಿ ಒಮಿಕ್ರಾನ್ ಸೋಂಕಿನ ಕಾಟವೂ ಹೆಚ್ಚಾಗುತ್ತಿದ್ದು, ಒಮಿಕ್ರಾನ್ ಪೀಡಿತರ ಸಂಖ್ಯೆ 5,488ಕ್ಕೆ ಏರಿಕೆಯಾಗಿದೆ.