ಬೆಂಗಳೂರಲ್ಲಿ ಇಂದು 1,156 ಜನರಲ್ಲಿ ಕೋವಿಡ್ ಪಾಸಿಟಿವ್ covid
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದು, ಇಂದು 1,156 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಪೈಕಿ 144 ಮಂದಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.
ನಗರದ ಬೊಮ್ಮನಹಳ್ಳಿಯಲ್ಲಿ 134, ದಾಸರಹಳ್ಳಿ 52, ಬೆಂಗಳೂರು ಪೂರ್ವ 114, ಮಹಾದೇವಪುರ 157, ಆರ್ಆರ್ ನಗರ 102,
ಬೆಂಗಳೂರು ದಕ್ಷಿಣ 118, ಬೆಂಗಳೂರು ಪಶ್ಚಿಮ 101, ಯಲಹಂಕದಲ್ಲಿ 82 ಜನರಿಗೆ ಸೋಂಕು ತಗುಲಿದೆ.
ನಗರದಲ್ಲಿನ್ನೂ ಈವರೆಗೆ 78,943 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣ ಶೇ. 2.3ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ ಶೇ. 1.59 ಇದೆ.
ನಿನ್ನೆ ನಗರದಲ್ಲಿ 1,209 ಪ್ರಕರಣಗಳು ಪತ್ತೆಯಾಗಿದ್ದವು. 17 ಮಂದಿ ಮೃತಪಟ್ಟಿದ್ದರು.