ಅಮೆರಿಕ ಬೆಂಬಲಿತ ‘ಕೋವ್ಯಾಕ್ಸ್’ ಕಾರ್ಯಕ್ರಮದಡಿ ಭಾರತಕ್ಕೂ ಲಸಿಕೆ ಹಂಚಿಕೆ
ಅಮೆರಿಕ ಬೆಂಬಲಿತ ಕೋವ್ಯಾಕ್ಸ್ ಜಾಗತಿಕ ಲಸಿಕೆ ಹಂಚಿಕೆ ಕಾರ್ಯಕ್ರಮದಡಿ ಬಳಕೆಯಾಗದ 8 ಕೋಟಿ ಡೋಸ್ ಲಸಿಕೆಗಳಲ್ಲಿ ಭಾರತಕ್ಕೂ ಲಸಿಕೆ ಹಂಚಿಕೆ ಮಾಡಲಾಗುವುದು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ. ಕೋವಾಕ್ಸ್ ಕಾರ್ಯಕ್ರಮದಡಿ 2.5 ಕೋಟಿ ಬಳಕೆಯಾಗದ ಡೋಸ್ಗಳ ಪೈಕಿ ಮೊದಲ ಹಂತದಲ್ಲಿ ಶೇಕಡ 75ರಷ್ಟು (1.9 ಕೋಟಿ ಡೋಸ್) ಲಸಿಕೆಯನ್ನು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಮತ್ತು ಆಫ್ರಿಕಾಗೆ ಹಂಚಿಕೆ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಜೂನ್ 2 ರಂದು ಘೋಷಿಸಿದ್ದರು. ಜಾಗತಿಕವಾಗಿ ಹಂಚಲಾಗುವ 8 ಕೋಟಿ ಡೋಸ್ ಲಸಿಕೆಗಳಲ್ಲಿ ಭಾರತಕ್ಕೂ ಪಾಲನ್ನು ನೀಡಲಾಗುವುದು. ಇದರಲ್ಲಿ ಬಹುಶಃ 60 ಲಕ್ಷ ಡೋಸ್ಗಳನ್ನು ಭಾರತಕ್ಕೆ ಹಂಚಿಕೆ ಮಾಡುವ ಸಾಧ್ಯತೆ ಇದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.