ಕೋವಿಡ್ 19 : ಕಳೆದ 24 ಗಂಟೆಗಳಲ್ಲಿ 13,091 ಕೊರೊನಾ ಪ್ರಕರಣಗಳು ಪತ್ತೆ
ನವದೆಹಲಿ : ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 13,091 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
340 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,44,01,670 ಕ್ಕೆ ತಲುಪಿದೆ.
ಸೋಂಕಿನಿಂದ ಮೃತರಾದವರ ಸಂಖ್ಯೆ 462,189 ಕ್ಕೆ ತಲುಪಿದೆ.
ಭಾರತದಲ್ಲಿ ಚೇತರಿಕೆಯ ಪ್ರಮಾಣವು ಪ್ರಸ್ತುತ 98.25 ರಷ್ಟಿದೆ, ಇದು ಮಾರ್ಚ್ 2020 ರಿಂದ ಅತ್ಯಧಿಕವಾಗಿದೆ.
13,878 ಜನ ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಒಟ್ಟು ಗುಣಮುಖರ ಸಂಖ್ಯೆ 3,38,00,925 ಕ್ಕೆ ತಲುಪಿದೆ.
ಇನ್ನು ದೇಶದಲ್ಲಿ ಇನ್ನೂ ಸಕ್ರಿಯ ಪ್ರಕರಣಗಳ ಸಂಖ್ಯೆ 1,38,556 ತಲುಪಿದೆ. ಇದು 266 ದಿನಗಳಲ್ಲಿ ಕಡಿಮೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 11.89 ಲಕ್ಷಕ್ಕೂ ಹೆಚ್ಚು ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ.
ಇದನ್ನೂ ಓದಿ :
ಸಿಎಂ ಬದಲಾವಣೆ ನೂರಕ್ಕೆ ನೂರು ಆಗುತ್ತೆ: ಶಿವರಾಜ್ ತಂಗಡಗಿ
ಕ್ರೀಡಾಸ್ಪೂರ್ತಿಗೆ ಮತ್ತೊಂದು ಹೆಸರೇ ನ್ಯೂಜಿಲೆಂಡ್ ತಂಡ