ದೇಶದಲ್ಲಿ ಕೊರೊನಾ ಮರಣಮೃದಂಗ – ಒಂದೇ ದಿನ 1,027 ಮಂದಿ ಸಾವು – 2 ಲಕ್ಷದತ್ತ ಕೊರೊನಾ..!
ನವದೆಹಲಿ : ಭಾರತದಲ್ಲಿ ಕೊರೊನಾ ರಣಕೇಕೆಗೆ ಜನ ತತ್ತೆರಿಸಿಹೋಗಿದ್ದಾರೆ. 2ನೇ ಅಲೆಯ ಮಹಾಸ್ಪೋಟವಾಗಿದ್ದು, ಒಂದೇ ದಿನ 1,84,372 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಒಂದೇ ದಿನ ಮಹಾಮಾರಿಗೆ 1,027 ಮಂದಿ ಬಲಿಯಾಗಿದ್ದಾರೆ.
ಒಟ್ಟಾರೆ ಪ್ರಕರಣಗಳ ಸಂಖ್ಯೆ 1,38,73,825ಗೆ ಏರಿಕೆಯಾಗಿದೆ. ಇದುವರೆಗೂ ಸೋಂಕಿನಿಂದ ಒಟ್ಟು 1,72,085 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ 82,339 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 1,23,36,036 ಆಗಿದೆ. ದೇಶದಲ್ಲಿ ಸದ್ಯಕ್ಕೆ 13,65,704 ಸಕ್ರಿಯ ಪ್ರಕರಣಗಳಿವೆ.
ಮೋದಿ ನಾಯಕತ್ವದಲ್ಲಿ ಪಾಕ್ ಗೆ ತಕ್ಕ ಪಾಠ : ಅಮೆರಿಕ ಬೇಹುಗಾರಿಕೆ ವರದಿ