ಡೆಲ್ಟಾ, ಆಲ್ಫಾರೂಪಾಂತರಿಗಳ ವಿರುದ್ಧ ಕೋವ್ಯಾಕ್ಸಿನ್ ಪರಿಣಾಮಕಾರಿ – NIH ವರದಿ
ನವದೆಹಲಿ : ಭಾರತ್ ಬಯೋಟೆಕ್ ಕಂಪನಿಯು ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಲಸಿಕೆಯು ಕೊರೊನಾ ವೈರಸ್ನ ರೂಪಾಂತರ ತಳಿಗಳಾದ ಡೆಲ್ಟಾ ಮತ್ತು ಆಲ್ಫಾ ಪರಿಣಾಮಕಾರಿಯಾಗಿದೆ.. ಅವುಗಳ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ NIH ತಿಳಿಸಿದೆ.
ಕೋವ್ಯಾಕ್ಸಿನ್ ಪಡೆದವರ ರಕ್ತದ ಸೀರಮ್ ನ ಆಧಾರವಾಗಿ ಎರಡು ಅಧ್ಯಯನಗಳು ನಡೆದಿವೆ. ಈ ಅಧ್ಯಯನಗಳ ಪ್ರಕಾರ, ಜನರ ದೇಹದಲ್ಲಿ ಕೋವಾಕ್ಸಿನ್ ಲಸಿಕೆಯು ಉತ್ಪತ್ತಿ ಮಾಡುವ ಪ್ರತಿಕಾಯಗಳು ಬಿ .1351 ಮತ್ತು ಬಿ .1.617.2 ರೂಪಾಂತರಿಗಳನ್ನು ತಟಸ್ಥಗೊಳಿಸುತ್ತದೆ ಎಂದು NIH ಹೇಳಿದೆ.
ದೇಶದಲ್ಲಿ 4ನೇ ಲಸಿಕೆಯಾಗಿ ಬಳಕೆಯಾಗಲಿದೆ ಅಮೆರಿಕಾದ ‘ಮಡೆರ್ನಾ’
ಇನ್ನೂ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವಾಕ್ಸಿನ್ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ. ಭಾರತ ಹಾಗೂ ಇತರ ದೇಶಗಳೂ ಸೇರಿದಂತೆ ಈ ವರೆಗೂ ಸುಮಾರು 2.5 ಕೋಟಿಗೂ ಅಧಿಕ ಜನರಿಗೆ ಕೋವಾಕ್ಸಿನ್ ಲಸಿಕೆಯನ್ನು ನೀಡಲಾಗಿದೆ ಎಂದು ಕೂಡ ತಿಳಿಸಿದೆ.
ದೇಹದಲ್ಲಿ ರೋಗನಿರೋಧಕ ಪ್ರತಿಕ್ರಿಯೆಗಳನ್ನು ಹೆಚ್ಚಿಸಲು ಮತ್ತು ಕೊರೊನಾ ರೂಪಾಂತರಿಗಳು ವಿರುದ್ಧ ಹೋರಾಡಲು ಲಸಿಕೆ ಪರಿಣಾಮಕಾರಿಯಾಗಿದೆ ಎಂದೂ ಎನ್ಐಎಚ್ ಅಭಿಪ್ರಾಯಪಟ್ಟಿದೆ. ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ‘ಬಿಬಿವಿ 152‘ ಅಥವಾ ಕೋವ್ಯಾಕ್ಸಿನ್ ಅನ್ನು ಐಸಿಎಂಆರ್-ಎನ್ಐವಿ ಮತ್ತು ಭಾರತ್ ಬಯೋಟೆಕ್ ಜಂಟಿಯಾಗಿ ಸಂಶೋಧಿಸಿವೆ.