ತುಮಕೂರು : ಮತಯಾಚಿಸುತ್ತಿದ್ದ (Election Campaign) ಸಂದರ್ಭದಲ್ಲಿ ಮಾಜಿ ಡಿಸಿಎಂ, ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ ಪರಮೇಶ್ವರ್ (Parameshwar) ಅವರ ತಲೆಗೆ ಕಲ್ಲೇಟು ಬಿದ್ದಿದೆ.
ಪರಮೇಶ್ವರ್ ಅವರು ಕೊರಟಗೆರೆ ತಾಲೂಕಿನ ಬೈರನಹಳ್ಳಿ ಕ್ರಾಸ್ ಹತ್ತಿರ ಮತಯಾಚಿಸುತ್ತಿದ್ದ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ನೆರೆದಿದ್ದರು. ಬೃಹತ್ ಹೂವಿನ ಹಾರ ಹಾಕಿ ಪರಮೇಶ್ವರ್ ಅವರನ್ನು ಸ್ವಾಗತಿಸುತ್ತಿದ್ದಂತೆ ಅವರ ತಲೆಯ ಮೇಲೆ ಕಲ್ಲು ಬಿದ್ದಿದೆ.
ತಲೆಗೆ ಭಾರೀ ಪೆಟ್ಟು ಬಿದ್ದಿದ್ದು ರಕ್ತ ಸ್ರಾವವಾಗಿದೆ. ಕೂಡಲೇ ಪರಮೇಶ್ವರ್ ಅವರನ್ನು ಅಕಿರಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಪರಮೇಶ್ವರ್ ಚಿಕಿತ್ಸೆ ಪಡೆಯುತ್ತಿದ್ದಾರೆ.