ಸಹೋದರನ ಜೊತೆ ಜಗಳ ಮಾಡಿಕೊಂಡಿದ್ದ ಯುವತಿ ಸಿಟ್ಟಿನ ಮೊಬೈಲ್ ಫೋನ್ ನುಂಗಿ ಎಡವಟ್ಟು ಮಾಡಿಕೊಂಡ ಘಟನೆ ಮಧ್ಯಪ್ರದೇಶ (Madhyapradesh) ದ ಭಿಂಡ್ ಪ್ರದೇಶದಲ್ಲಿ ನಡೆದಿದೆ.
18ರ ಯುವತಿ ಮೊಬೈಲ್ ನುಂಗಿದ ವಿಚಾರ ತಿಳಿಯುತ್ತಿದ್ದಂತೆಯೇ ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಸರ್ಜರಿ (Surgery) ಮಾಡಲಾಗಿದೆ. 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಮೊಬೈಲ್ ಫೋನ್ (Mobile Phone) ಅನ್ನು ವೈದ್ಯರು ಹೊಟ್ಟೆಯಿಂದ ತೆಗೆದಿದ್ದಾರೆ. ಸದ್ಯ ಯುವತಿಯ ಆರೋಗ್ಯದಲ್ಲಿ ಸ್ಥಿರವಾಗಿದೆ ಎನ್ನಲಾಗಿದೆ.
ಮೊಬೈಲ್ ನುಂಗಿದ ಕೂಡಲೇ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೀಗಾಗಿ ಯುವತಿಯನ್ನು ಗ್ವಾಲಿಯರ್ ನ ಜೈರೋಗ್ಯ ಆಸ್ಪತ್ರೆಗೆ ದಾಖಲಿಸಿ ತಕ್ಷಣವೇ ಶಸ್ತ್ರಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಸಹೋದರನೊಂದಿಗೆ ಯಾವ ಕಾರಣಕ್ಕೆ ಜಗಳವಾಡಿದ್ದಳು ಎಂಬುವುದು ಮಾತ್ರ ಗೊತ್ತಾಗಿಲ್ಲ.