ದೂರು ದಾಖಲಿಸಲು ಬಂದ ಅತ್ಯಾಚಾರ ಸಂತ್ರಸ್ತೆಯನ್ನ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಕಾಮುಕ ACP ಅಮಾನತು..!
ರಾಜಸ್ಥಾನ : ಅತ್ಯಾಚಾರಕ್ಕೊಳಗಾದ ಯುವತಿ ಯ ದೂರು ಸ್ವೀಕರಿಸಲು ತನ್ನ ಜೊತೆ ಲೈಂಗಿಕ ಸಂಪರ್ಕ ಹೊಂದುವಂತೆ ಟಾರ್ಚರ್ ಕೊಟ್ಟಿದ್ದ ಕಾಮುಕ ಪೊಲೀಸ್ ಅಧಿಕಾರಿಯನ್ನ (ACP) ಅಮಾನತು ಮಾಡಲಾಗಿದೆ.
ರಾಜಸ್ಥಾನದ ಜೈಪುರದಲ್ಲಿ ಇಂತಹದೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕೈಲಾಶ್ ಬೊಹರಾ ಎಂಬ ಕಾಮುಕ ACP ಸದ್ಯ ಕೆಲಸ ಕಳೆದುಕೊಂಡಿದ್ದಾನೆ. ಉನ್ನತ ಅಧಿಕಾರಿಗಳಲ್ಲಿ ಈಕೆ ACP ಇರುದ್ಧ ದೂರು ಸಲ್ಲಿಸಿದ ಬಳಿಕ ಕೆಲಸದಿಂದ ಅಮಾನತು ಮಾಡಲಾಗಿದೆ.
ಪೊಲೀಸ್ ಇಲಾಖೆ ಬೊಹರಾನನ್ನು ವಜಾ ಮಾಡಿ ಆದೇಶಿಸಿದೆ. ಈ ವಜಾ ಆದೇಶಕ್ಕೆ ರಾಜ್ಯಪಾಲರು ಕೂಡ ಅನುಮೋದನೆ ನೀಡಿದ್ದಾರೆ. ಕಳೆದ ತಿಂಗಳು ನನ್ನ ಮೇಲೆ ಅತ್ಯಾಚಾರ ನಡೆದಿತ್ತು. ಇದರ ಬಗ್ಗೆ ದೂರು ದಾಖಲು ಮಾಡಲು ಹೋಗಿದ್ದೆ.
ಆ ಸಮಯದಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲು ನನ್ನ ಜತೆ ಲೈಂಗಿಕ ಸಂಪರ್ಕ ಮಾಡು ಎಂದು ಬೊಹರಾ ಹೇಳಿರುವುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಉತ್ತರಪ್ರದೇಶ : ಗೃಹಿಣಿ ಮೇಲೆ ಗನ್ ಪಾಯಿಂಟ್ ನಲ್ಲಿ ಸಾಮೂಹಿಕ ಅತ್ಯಾಚಾರ..!