ದೆಹಲಿ : ಮಹಿಳೆಯ ಮೇಲೆ ಕ್ಯಾಬ್ ಚಾಲಕನಿಂದ ಅತ್ಯಾಚಾರ
ಮಹಿಳೆಗೆ ಲಿಫ್ಟ್ ಕೊಡುವ ನೆಪದಲ್ಲಿ ಕ್ಯಾಬ್ ಗೆ ಹತ್ತಿಸಿಕೊಂಡಿದ್ದ ಚಾಲಕ ನಿರ್ಜನ ಪ್ರದೇಶಕ್ಕೆ ಎರಳಿ ಕ್ಯಾಬ್ ನಿಲ್ಲಿಸಿ ಾಕೆಯ ಮೇಲೆ ಅತ್ಯಾಚಾರವೆಸಗಿರೋ ಘಟನೆ ರಾಷ್ಟ್ರ ರಾಜದಾನಿ ದೆಹಲಿಯಲ್ಲಿ ನಡೆದಿದೆ.. ಮಹಿಳೆಯು ಮಾಲ್ ಒಂದ್ರಲ್ಲಿ ಕೆಲಸ ಮಾಡ್ತಿದ್ದು, 8. ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳಲು ಬಸ್ ಸ್ಟಾಂಡ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದರು.. ಆದ್ರೆ ಅಲ್ಲಿಗೆ ಬಂದಿರುವ ಕ್ಯಾಬ್ ಚಾಲಕ ಲಿಫ್ಟ್ ಕೊಡುವುದಾಗಿ ಹೇಳಿದ್ದಾನೆ.. ಬಳಿಕ ಹಿಂಬದಿಯ ಸೀಟ್ ಗನ್ನ ಮುಂದೆ ಮಾರ್ಗ ಮಧ್ಯ ಹತ್ತಲಿರುವ ಪ್ರಯಾಣಿಕರಿಗಾಗಿ ಬಿಡುವಂತೆ ತಿಳಿಸಿದ್ದಾನೆ.. ಅಂತೆಯೇ ಮಹಿಳೆ ಮುಂಬದಿ ಸೀಟ್ ನಲ್ಲಿ ಕುಳಿತ್ತಿದ್ದಾರೆ.. ಆದ್ರೆ ಆತ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಕ್ಯಾಬ್ ನಿಲ್ಲಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿ ದೂರು ದಾಖಲು ಮಾಡಿರೋದಾಗಿ ಪೊಲೀಸರು ತಿಳಿಸಿದ್ದಾರೆ..
ಘಟನೆ ಬಳಿಕ ಕ್ಯಾಬ್ ಚಾಲಕ ಮಹಿಳೆಯನ್ನ ಆಯ ನಗರದ ಬಳಿ ಬಿಟ್ಟು ಪರಾರಿಯಾಗಿದ್ದಾನೆ.. ಮಹಿಳೆಯು ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.. ಅಲ್ಲದೇ ಯಾರಿಗಾದ್ರೂ ವಿಚಾರ ತಿಳಿಸಿದ್ರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಹಿಳೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಅತ್ಯಾಚಾರ ನಡೆದಿರುವುದು ಖಚಿರತವಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..