ವಿಮೆ ಹಣ ಪಡೆಯಲು ಪತಿಯನ್ನು ಜೀವಂತವಾಗಿ ಸುಟ್ಟುಹಾಕಿದ ಪತ್ನಿ..!
ತಮಿಳುನಾಡು : ಪತ್ನಿಯೊಬ್ಬಳು ವಿಮಾ ಹಣಕ್ಕಾಗಿ ತನ್ನ ಪತಿಯನ್ನ ಜೀವಂತವಾಗಿಯೇ ಸುಟ್ಟುಹಾಕಿ ರಾಕ್ಷಸತ್ವ ಮೆರೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನೊಲ್ಲಿ ನಡೆದಿದೆ. 3.5 ಕೋಟಿ ರೂಪಾಯಿ ವಿಮೆ ಹಣ ಪಡೆಯಲು ಮಹಿಳೆಯೊಬ್ಬಳು ತನ್ನ ಗಂಡನಿಗೆ ಬೆಂಕಿ ಇಟ್ಟು ಕೊಂದಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮಹಿಳೆ ಹಾಗೂ ಆಕೆಯ ಸಂಬಂಧಿಯೊಬ್ಬನನ್ನ ಬಂಧಿಸಿದ್ದಾರೆ.
57 ವರ್ಷದ ಮಹಿಳೆ ತನ್ನ 62 ವರ್ಷದ ಗಂಡನನ್ನು ಕೊಲೆ ಮಾಡಲು ಸಂಬಂಧಿಕನೊಬ್ಬನ ನೆರವು ಪಡೆದಿದ್ದಳು. ಇಬ್ಬರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ರಂಗರಾಜ್ ಮೃತ ದುರ್ದೈವಿಯಾಗಿದ್ದಾರೆ. ಪತ್ನಿ ಜ್ಯೋತಿಮಣಿ ಮತ್ತು ಸಂಬಂಧಿಕ ರಾಜ ಆರೋಪಿಗಳು. ವಿದ್ಯುತ್ ಮಗ್ಗದ ಘಟಕವನ್ನು ಹೊಂದಿದ್ದ ರಂಗರಾಜ್ ಮಾರ್ಚ್ 15 ರಂದು ಅಪಘಾತದಲ್ಲಿ ಗಾಯಗೊಂಡಿದ್ದರು ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಬಳಿಕ ಆಸ್ಪತ್ರೆಯಿಂದ ರಂಗರಾಜ್ ನನ್ನ ಡಿಸ್ಚಾರ್ಜ್ ಮಾಡಿದ ಆರೋಪಿಗಳು ಅವರನ್ನ ವ್ಯಾನ್ ಮೂಲಕ ಕರೆದೊಯ್ದಿದ್ದಾರೆ. ಬಳಿಕ ವಲಸುಪಾಲಯಂಗೆ ತಲುಪಿ ಅಲ್ಲಿ ವಾಹನದಿಂದ ಜ್ಯೋತಿಮಣಿ ಹಾಗೂ ರಾಜ ವಾಹನದಿಂದ ಇಳಿದಿದ್ದಾರೆ. ಬಳಿಕ ವಾಹನ ಸಮೇತ ರಂಗರಾಜ್ ಅವರನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ.
ಬಳಿಕ ತಿರುಪುರ್ ಗ್ರಾಮೀಣ ಪೊಲೀಸರ ಬಳಿ ದೊಡ್ಡ ಡ್ರಾಮಾ ಮಾಡಿದ್ದಾರೆ. ಅಪಘಾತದಿಂದ ಬೆಂಕಿ ತಗುಲಿ ರಂಗರಾಜ್ ಮೃತಪಟ್ಟಿರುವುದಾಗಿ ಕಟ್ಟು ಕಥೆ ಕಟ್ಟಿದ್ದಾರೆ. ಆದ್ರೆ ಇಬ್ಬರ ಡ್ರಾಮಾದ ಸುಳಿವು ಸಿಕ್ಕಿದ್ದ ಪೊಲೀಸರು ರಾಜನ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಆಗ ಆತ ಕ್ಯಾನ್ ನಲ್ಲಿ ಪೆಟ್ರೋಲ್ ಖರೀದಿಸಿದ್ದು ಗೊತ್ತಾಗಿದೆ.
ನಂತರ ಪೆಟ್ರೋಲ್ ಬಂಕ್ ನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ. ಇನ್ನೂ ಗಂಡನ ಸಾವಿನ ನಂತರ ಹಣ ಪಡೆಯಲು ನಾಮಿನಿಯಾಗಿದ್ದ ಜ್ಯೋತಿಮಣಿ ಹಣದಾಸೆಯಿಂದ ಹೀಗೆ ಮಾಡಿದ್ದು, ಈಕೆಗೆ ಸಾಥ್ ನೀಡಲು ರಾಜ 1.50 ಲಕ್ಷ ಪಡೆದಿದ್ದ ಎನ್ನಲಾಗಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
20ರ ಯುವತಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ 17 ರ ಬಾಲಕ ಅರೆಸ್ಟ್..!
ರೈಲು ನಿಲ್ದಾಣದಲ್ಲಿ ನೀರು ತರುತ್ತೇನೆ ಅಂತ ಹೋದ ಪತ್ನಿ ಮತ್ತೊಬ್ಬನ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಳು..!
BiggBoss 8 – ಆ ನಾಲ್ವರನ್ನ ಯಾವತ್ತೂ ನೋಡಲು ಇಷ್ಪಡುವುದಿಲ್ಲ – ಶಂಕರ್ ಅಶ್ವಥ್..! ಸದಸ್ಯರ ಬಗ್ಗೆ ಹೇಳಿದ್ದೇನು..?








