Cristiano Ronaldo : 2 ವರ್ಷಕ್ಕೆ 17 ಸಾವಿರ ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ ಕ್ರಿಸ್ಟಿಯಾನೋ ರೊನಾಲ್ಡೊ…
ಪೋರ್ಚುಗಲ್ ನ ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಇಂಗ್ಲೆಂಡ್ನ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದಿರುವ ಸುದ್ಧಿ ಗೊತ್ತೆ ಇದೆ. ಇದೀಗ ಬದಲಿಯಾಗಿ ಅರೇಬಿಯಾದ ಕ್ಲಬ್ ಅಲ್ ನಾಸರ್ ಜೊತೆಗೆ ಆಡಲು ಉತ್ಸುಕತೆಯ್ನ ತೋರಿಸಿದ್ದಾರೆ.
ರೊನಾಲ್ಡೊ ಸೌದಿಯ ಅಲ್ ನಾಸರ್ ಕ್ಲಬ್ ಜೊತೆಗೆ 200 ಮಿಲಿಯನ್ ಯುರೋ ಅಂದರೆ 17 ಸಾವಿರ ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. 37 ವರ್ಷದ ರೊನಾಲ್ಡೊ 2025 ರವರೆಗೆ ಈ ಕ್ಲಬ್ ಪರ ಆಡಲಿದ್ದಾರೆ. ಅಲ್ ನಾಸರ್ ಕ್ಲಬ್ ಜೆರ್ಸಿ ಜೊತೆಗೆ ರೊನಾಲ್ಡೋ ಫೋಟೋ ಹಂಚಿಕೊಳ್ಳಲಾಗಿದೆ. ಜೆರ್ಸಿ ಮೇಲೆ ನೆಚ್ಚಿನ ಸಂಖ್ಯೆ 7 ನ್ನ ಮುದ್ರಿಸಲಾಗಿದೆ.
ತಂಡಕ್ಕೆ ಸೇರ್ಪಡೆಗೊಂಡ ನಂತರ, ಅಲ್ ನಾಸರ್ ಪರ ಆಡಲು ಎದುರು ನೋಡುತ್ತಿದ್ದೇನೆ ಎಂದು ರೊನಾಲ್ಡೊ ಹೇಳಿದ್ದಾರೆ. ‘ಯುರೋಪಿಯನ್ ಫುಟ್ಬಾಲ್ನಲ್ಲಿ ನಾನು ಮಾಡಬೇಕಾದ ಎಲ್ಲವನ್ನೂ ಸಾಧಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆ’ ಏಷ್ಯಾದಲ್ಲಿ ನನ್ನ ಅನುಭವವನ್ನು ಹಂಚಿಕೊಳ್ಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಅಲ್ ನಾಸರ್ ಸೌದಿ ಅರೇಬಿಯನ್ ಪ್ರೊ ಲೀಗ್ ಪ್ರಶಸ್ತಿಯನ್ನು 9 ಬಾರಿ ಗೆದ್ದಿದ್ದಾರೆ. ಕ್ಲಬ್ ಈ ಪ್ರಶಸ್ತಿಯನ್ನು ಕೊನೆಯ ಬಾರಿಗೆ 2019 ರಲ್ಲಿ ಗೆದ್ದುಕೊಂಡಿತು.
ಅಂದಹಾಗೆ, ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗಿನ ರೊನಾಲ್ಡೊ ಅವರ ಅಧಿಕಾರಾವಧಿಯು ಜೂನ್ 2023 ರಲ್ಲಿ ಮುಗಿಯಲಿದೆ. ಅದಕ್ಕೆ ಇನ್ನೂ 7 ತಿಂಗಳುಗಳು ಉಳಿದಿವೆ. ಆದಾಗ್ಯೂ ಯುನೈಟೆಡ್ ಜೊತೆಗಿನ ಸಂಬಂಧ ಹಳಸಿರುವ ಕಾರಣ 7 ತಿಂಗಳ ಮುಂಚೆಯೆ ಪ್ರಾಂಚೈಸಿ ಬಿಡಲು ಸಿದ್ಧವಾಗಿದ್ದಾರೆ. ಇಲ್ಲಿ ಪ್ರತಿ ವಾರಕ್ಕೆ ಸುಮಾರು 5 ಕೋಟಿ ರುಪಾಯಿ ಸಂಬಳ ಪಡೆಯುತ್ತಿದ್ದರು. ರೊನಾಲ್ಡೊ ಯುನೈಟೆಡ್ ಪರ 346 ಪಂದ್ಯಗಳಲ್ಲಿ 145 ಗೋಲುಗಳನ್ನು ಗಳಿಸಿದ್ದಾರೆ.
Cristiano Ronaldo: Cristiano Ronaldo signed a 17 thousand crore contract for 2 years…