ಮಳೆಯಿಂದ ಬೆಳೆ ನಾಶ : ರೈತ ಆತ್ಮಹತ್ಯೆ suicide saaksha tv
ಶಿರಸಿ : ಮಳೆಯಿಂದ ಬೆಳೆ ನಾಶವಾಗಿದ್ದಕ್ಕೆ ಬೇಸರಗೊಂಡ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದಿದೆ.
ಬನವಾಸಿಯ ನರೂರು ಗ್ರಾಮದ ಗಂಗಾಧರ ಫಕೀರಣ್ಣ ಶೇಷಣ್ಣನವರ್ (58) ಆತ್ಮಹತ್ಯೆಗೆ ಶರಣಾದ ರೈತ.
ಈತ ತನ್ನ ಗದ್ದೆಯಲ್ಲಿ ಶುಂಠಿ, ಭತ್ತದ ಬೆಳೆ ಹಾಕಿದ್ದರು. ಆದ್ರೆ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಬೆಳೆ ಎಲ್ಲಾ ನಾಶವಾಗಿದೆ.
ಇದರಿಂದ ಮನನೊಂದ ರೈತ ನವೆಂಬರ್ 17ರಂದು ಕೀಟ ನಾಶಕ ಸೇವಿಸಿದ್ದರು.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಇನ್ನು ಈ ಸಂಬಂಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.