ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಹರಿಸುತ್ತಿರುವುದನ್ನು ವಿರೋಧಿಸಿ ಒಂದೇ ವಾರದಲ್ಲಿ ಎರಡು ಬಾರಿ ಬಂದ್ ಗೆ ಕರೆ ನೀಡಿದ್ದವು. ಹೀಗಾಗಿ ಕೋಟಿ ಕೋಟಿ ರೂ. ನಷ್ಟವಾಗಿವೆ.
ಸರ್ಕಾರಕ್ಕೆ ಕೋಟಿ ಕೋಟಿ ರೂ. ನಷ್ಟವಾಗಿದೆ. ವಾರದಲ್ಲಿ ಎರಡು, ಎರಡು ಬಂದ್ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳಿಗೆ, ಹೋಟೆಲ್, ಬಾರ್ ರೆಸ್ಟೋರೆಂಟ್ ಮತ್ತು ವೈನ್ ಸ್ಟೋರ್ಸ್ ನಷ್ಟಕ್ಕೆ ತುತ್ತಾಗಿವೆ.
ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ಗೆ ಕರೆ ನೀಡಲಾಗಿತ್ತು. ಶುಕ್ರವಾರದ ಕರ್ನಾಟಕ ಬಂದ್ ನಡೆಸಿದ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ ಹಾಗೂ ಮೆಟ್ರೋ ನಿಗಮಕ್ಕೆ ಕೋಟ್ಯಾಂತರ ರುಪಾಯಿ ನಷ್ಟವಾಗಿದೆ. ಮೂರು ನಿಗಮಗಳಿಗೆ ಅಂದಾಜು 15 ಕೋಟಿ ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ.
ಬೆಂಗಳೂರು ನಗರದಲ್ಲಿ ಒಟ್ಟು 3850 ಮದ್ಯ ಮಾರಾಟ ಅಂಗಡಿಗಳಿವೆ. ಮಂಗಳವಾರ ಮತ್ತು ಶುಕ್ರವಾರದ ಬಂದ್ನಿಂದ ಅಂದಾಜು 180 ರಿಂದ 200 ಕೋಟಿ ರೂ. ನಷ್ಟವಾಗಿದೆ.