ಮಹಾನಗರದ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮೇ4ರಂದು ನಡೆಯಬೇಕಿದ್ದ ಚ್ನೆನೈ ಮತ್ತು ಲಕ್ನೋ ನಡುವಿನ ಪಂದ್ಯ ಒಂದು ದಿನ ಮುಂಚಿತವಾಗಿ ನಡೆಯಲಿದೆ.
ಪಂದ್ಯ ಮೇ4ರಂದು ಮಧ್ಯಾಹ್ನ 3.30ಕ್ಕೆ ನಡೆಯಬೇಕಿತ್ತು. ಅಂದು ಲಖನೌ ನಗರ ಸಭಾ ಚುನಾವಣೆ ನಡೆಯಲಿದೆ. ಭದ್ರತೆ ಸಮಸ್ಯೆ ಹಿನ್ನೆಲೆಯಲ್ಲಿ ಮೇ 3ರಂದು ಮಧ್ಯಾಹ್ನ ನಡೆಸಲು ಐಪಿಎಲ್ ಆಡಳಿತ ಮಂಡಳಿ ತೀರ್ಮಾನಿಸಿದೆ.
ಆದರೀಗ ಈ ಪಂದ್ಯವನ್ನು ಮೇ 3 ರಂದು ನಡೆಸಲು ತೀರ್ಮಾನಿಸಲಾಗಿದೆ. ಮೇ. 4 ರಂದು ಲಕ್ನೋ ನಡೆಯಲಿದ್ದು, ಹೀಗಾಗಿ ಅಂದು ರಾತ್ರಿ ನಡೆಯಬೇಕಿದ್ದ ಪಂದ್ಯವನ್ನು ಮೇ 3 ರಂದು ನಡೆಸಲು ನಿರ್ಧಾರಿಸಲಾಗಿದೆ. ಅದರಂತೆ ಮೇ 3ರಂದು ಲಕ್ನೋದ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 3.30ಕ್ಕೆ ಚೆನ್ನೈ, ಲಕ್ನೋ ಪಂದ್ಯ ನಡೆಯಲಿದೆ.
ಇನ್ನು ಉಭಯ ತಂಡಗಳೂ ಬಲಿಷ್ಠವಾಗಿರುವ ಕಾರಣ ಈ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.