Cyber Attack – ದೇಶದ 500 ವೆಬ್ಸೈಟ್ ಗಳ ಮೇಲೆ ಸೈಬರ್ ದಾಳಿ…
ಮಂಗಳವಾರ ದೇಶದಲ್ಲಿ ದೊಡ್ಡ ಸೈಬರ್ ದಾಳಿ ನಡೆದಿದೆ. ದೇಶದ 500 ಕ್ಕೂ ಹೆಚ್ಚು ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲಾಗಿದೆ. ಇವುಗಳಲ್ಲಿ ಮಹಾರಾಷ್ಟ್ರದ ಥಾಣೆ ಪೊಲೀಸರ ಸೈಟ್ ಸೇರಿದಂತೆ 70 ವೆಬ್ಸೈಟ್ಗಳನ್ನ ಹ್ಯಾಕ್ ಮಾಡಲಾಗಿದೆ. ಪ್ರಕರಣದಲ್ಲಿ ಮಲೇಷ್ಯಾ ಮತ್ತು ಇಂಡೋನೇಷ್ಯಾದ ಹ್ಯಾಕರ್ಗಳ ಮೇಲೆ ಶಂಕೆ ವ್ಯಕ್ತವಾಗಿದೆ.
ನಾವು ಅನೇಕ ವೆಬ್ಸೈಟ್ಗಳನ್ನು ಮರುಸ್ಥಾಪಿಸಿದ್ದೇವೆ ಎಂದು ಮಹಾರಾಷ್ಟ್ರ ಸೈಬರ್ ಸೆಲ್ನ ಎಡಿಜಿ ಮಧುಕರ್ ಪಾಂಡೆ ಹೇಳಿದ್ದಾರೆ. ಖಾಸಗಿ ವಿಶ್ವವಿದ್ಯಾಲಯಗಳ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿದ ನಂತರ, ರಾಜ್ಯದ 70 ಕ್ಕೂ ಹೆಚ್ಚು ವೆಬ್ಸೈಟ್ಗಳ ಮೇಲೆ ದಾಳಿ ನಡೆಸಲಾಗಿದೆ. ಇವುಗಳಲ್ಲಿ ಮೂರು ಸರ್ಕಾರದ ವೆಬ್ಸೈಟ್ ಗಳಿವೆ. ಹ್ಯಾಕ್ ಮಾಡಿದ ವೆಬ್ಸೈಟ್ಗಳ ಸಂಖ್ಯೆ 500 ಕ್ಕೂ ಹೆಚ್ಚಿದೆ.
ದೇಶದಲ್ಲಿ ನಡೆಯುತ್ತಿರುವ ಕೋಮು ಉದ್ವಿಗ್ನತೆಯ ಮಧ್ಯೆ ಹಲವು ಸೈಬರ್ ಹ್ಯಾಕರ್ಗಳು ಸೇರಿ ಈ ದಾಳಿ ನಡೆಸಿದ್ದಾರೆ ಎಂದು ಎಡಿಜಿ ಪಾಂಡೆ ಹೇಳಿದ್ದಾರೆ. ಪ್ರಕರಣದಲ್ಲಿ ಮಲೇಷ್ಯಾ ಮತ್ತು ಇಂಡೋನೇಷ್ಯಾ ಎಂಬ ಎರಡು ದೇಶಗಳ ಹ್ಯಾಕರ್ಗಳ ಹೆಸರುಗಳು ಹೊರಬರುತ್ತಿವೆ. ಈ ಗ್ಯಾಂಗ್ ಭಾರತದಲ್ಲಿ ಸಕ್ರಿಯವಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಮಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಎಂದಿದ್ದಾರೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಪೊಲೀಸ್ ವೆಬ್ಸೈಟ್ ಹ್ಯಾಕ್ ಮಾಡಲಾಗಿದೆ ಎಂದು ಥಾಣೆ ಪೊಲೀಸ್ ಸೈಬರ್ ಸೆಲ್ ಡಿಸಿಪಿ ಸುನೀಲ್ ಲೋಖಂಡೆ ತಿಳಿಸಿದ್ದಾರೆ. ತಾಂತ್ರಿಕ ತಜ್ಞರು ಡೇಟಾ ಮತ್ತು ವೆಬ್ಸೈಟ್ ಅನ್ನು ಮರುಸ್ಥಾಪಿಸಿದ್ದಾರೆ. ಪ್ರಕರಣದ ಪರಿಶೀಲನೆ ನಡೆಯುತ್ತಿದೆ.