ಶಾಹೀನ್ ಚಂಡಮಾರುತ ಅಬ್ಬರ ಶುರು : 7 ರಾಜ್ಯಗಳಲ್ಲಿ 3 ದಿನ ಭಾರಿ ಮಳೆ
ನವದೆಹಲಿ : ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಶಾಹೀನ್ ಚಂಡಮಾರುತ ಇಂದು ಬೆಳಗ್ಗೆ ಗುಜರಾತ್ ನ ಕರಾವಳಿ ತೀರಕ್ಕೆ ಅಪ್ಪಳಿಸಿದೆ.
ಪರಿಣಾಮ ಭಾರತದ ಕರಾವಳಿ ತೀರದ ಮೇಲೆ ಹೆಚ್ಚಾಗಿರುವುದರಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆದರೂ ಗುಜರಾತ್, ಬಿಹಾರ. ಪಶ್ಚಿಮ ಬಂಗಾಳ, ಸಿಕ್ಕಿಂ, ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.
ಸದ್ಯದ ಮಾಹಿತಿ ಪ್ರಕಾರ ಶಾಹೀನ್ ಚಂಡಮಾರುತ, ಗುಜರಾತ್ ನಿಂದ ಪಾಕಿಸ್ತಾನದ ಕಡೆ ತೆರಳಿದೆ.
ಹೀಗಾಗಿ ಚಂಡಮಾರುತದ ಪರಿಣಾಮ ಪಾಕಿಸ್ತಾನ, ಇರಾನ್ ದೇಶಗಳಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಗುಜರಾತ್, ಮಹಾರಾಷ್ಟ್ರ, ಒರಿಸ್ಸಾ, ಕೇರಳ, ತಮಿಳುನಾಡು, ಕರ್ನಾಟಕದ ಕರಾವಳಿ ತೀರದಲ್ಲಿ ಶಾಹೀನ್ ಚಂಡಮಾರುತದ ಪರಿಣಾಮ ಕೊಂಚ ಮಟ್ಟಿಗೆ ಇರಲಿದೆ.
ಈ ಹಿನ್ನೆಲೆಯಲ್ಲಿ ಈ ರಾಜ್ಯಗಳಲ್ಲಿ ಇಂದಿನಿಂದ 3 ದಿನ ಮಳೆ ಹೆಚ್ಚಾಗಲಿದೆ. ರಾಜ್ಯದ ಕರಾವಳಿ ಪ್ರದೇಶ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ.
ಸದ್ಯ ರಾಜ್ಯದ ವಿವಿಧ ಭಾಗಳಲ್ಲಿ ಮಳೆ ಬೀಳುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಮೋಡ ಮುಸುಕಿದ ವಾತಾವರಣ ಮುಂದುವರೆದಿದೆ.