ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯು ಅಕ್ಟೋಬರ್ 1ರಿಂದ ಮತ್ತೆ ಏರಿಕೆ ಕಂಡಿದೆ. 19 ಕೆ.ಜಿಗಳ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 209 ರೂ. ಗಳಷ್ಟು ಹೆಚ್ಚಿಸಲಾಗಿದೆ.
ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಸತತ ಎರಡು ಬಾರಿ ಅಂದಾಜು 250 ರೂ.ಇಳಿಕೆಯಾಗಿತ್ತು. ಈಗ ಮತ್ತೆ ವಾಣಿಜ್ಯ ಸಿಲಿಂಡರ್ ಬೆಲೆ 209 ರೂ. ಏರಿಕೆಯಾಗಿದೆ. ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 1,522.50 ರೂ.ನಿಂದ 1,731.50 ರೂ. ಗೆ ಹೆಚ್ಚಿಸಲಾಗಿದೆ.
ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,684 ರೂ. ಆಗಲಿದೆ. ಸೆಪ್ಟೆಂಬರ್ 1 ರಂದು, ಸರ್ಕಾರವು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಸುಮಾರು 158 ರೂಪಾಯಿಯಷ್ಟು ಕಡಿತಗೊಳಿಸಿತ್ತು. ಆಗಸ್ಟ್ 1ರಂದು 99.75 ರೂ. ಇಳಿಕೆ ಮಾಡಲಾಗಿತ್ತು. ಸದ್ಯ ಮತ್ತೆ ಏರಿಕೆ ಮಾಡಲಾಗಿದೆ.
ಆದರೆ, ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಮಾತ್ರ ತಟಸ್ಥವಾಗಿದೆ. ಸದ್ಯ ಮನೆ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ದೆಹಲಿಯಲ್ಲಿ 903 ರೂ. ಇದೆ.