Karnataka BJP | ಹಿಂದೂವಿರೋಧಿಡಿಕೆಶಿ ಅವರೇ ಮೊದಲು ರಾಜೀನಾಮೆ ನೀಡಿ
ಬೆಂಗಳೂರು : ಹಿಂದೂವಿರೋಧಿಡಿಕೆಶಿ ಅವರೇ ಮೊದಲು ರಾಜೀನಾಮೆ ನೀಡಿ ಎಂದು ಕರ್ನಾಟಕ ಬಿಜೆಪಿ ಆಗ್ರಹಿಸಿದೆ.
ಜೂ.15ರಂದು ರಾತ್ರಿ 9ಗಂಟೆಗೆ ಕ್ಲಬ್‌ಹೌಸ್‌ನಲ್ಲಿ ‘ಸಂಡೇ ಅಂಕಲ್ಸ್ ಆರ್ ಮಂಡೇ ನರ್ಸ್’ಎಂಬ ಕಾರ್ಯಕ್ರಮವನ್ನು ತಂಡವೊಂದು ನಡೆಸಿತ್ತು. ಅದರಲ್ಲಿ ಶೈಲಜಾ ಅಮರನಾಥ್ ಸಹಿತ ಮುಂತಾದವರು ಭಾಗವಹಿಸಿದ್ದರು. ಈ ವೇಳೆ ಹಿಂದೂ ದೇವರು ದೇವತೆಗಳಿಗೆ ಅವಮಾನ ಮಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ರಾಜ್ಯ ಬಿಜೆಪಿ ಘಟಕ ಆಕ್ರೋಶ ಹೊರಹಾಕಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಮಾನ್ಯ ಡಿಕೆಶಿ ಅವರೇ, ನಿಮ್ಮ ಪಕ್ಕದಲ್ಲಿ ನಿಂತು ಪೋಸು ಕೊಡುತ್ತಿರುವ ಈ ಮಹಿಳಾಮಣಿ ನಿಮಗೆ ಅಪರಿಚಿತರಾಗಿರಲು ಸಾಧ್ಯವೇ ಇಲ್ಲ. ಶ್ರೀಮದ್ ರಾಮಾಯಣದ ಬಗ್ಗೆ, ಸೀತಾ ಮಾತೆ, ಶ್ರೀ ರಾಮಚಂದ್ರ, ಹನುಮಂತನ ಬಗ್ಗೆ ಈಕೆ ಮಾಡಿದ ವ್ಯಾಖ್ಯಾನವನ್ನು ಕಾಂಗ್ರೆಸ್ ಪಕ್ಷ ಒಪ್ಪುತ್ತದೆಯೇ?
ಡಿಕೆಶಿ ಅವರೇ, ನೀವು ಕೂಡಾ ಸಿದ್ದರಾಮಯ್ಯ ಜಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದೀರಾ?ಹಿಂದೂ ದೇವ- ದೇವತೆ, ರಾಮಾಯಣಕ್ಕೆ ಅಪಮಾನ ಮಾಡಿದ ಶೈಲಜಾ ಅಮರನಾಥ್‌ಗೆ ಆಶ್ರಯ ನೀಡುವ ಮೂಲಕ ನಿಮ್ಮ ಅಂತರಾಳದಲ್ಲಿ ಇರುವ ಹಿಂದು ವಿರೋಧಿ ನೀತಿಯನ್ನು ಈಗ ಬಹಿರಂಗಪಡಿಸಿದ್ದೀರಿ.ಸಿದ್ದರಾಮಯ್ಯ ಒಬ್ಬ ಹಿಂದು ವಿರೋಧಿ. ನೀವೂ ಅವರಂತೆಯೇ ಎಂದು ಪ್ರಶ್ನಿಸಿದೆ.
ಸೀತಾ ಮಾತೆಗೆ ಅಪಮಾನ ಮಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಪಾದ ಸೇವೆ ಮಾಡುವುದಕ್ಕೆ ನಿಮಗೆ ಎಲ್ಲಿಲ್ಲದ ಖುಷಿ.ಅದೇ ರೀತಿ ರಾಮಾಯಣಕ್ಕೆ ಅಪಮಾನ ಮಾಡಿದ ಶೈಲಜಾ ಅಮರನಾಥ್ ರಕ್ಷಣೆ ಮಾಡುವುದು ನಿಮ್ಮ ಆದ್ಯತೆಯೇ?ಹಿಂದುಗಳ ಭಾವನೆಗೆ ಧಕ್ಕೆ ತಂದ ನೀವು ಮೊದಲು ರಾಜೀನಾಮೆ ನೀಡಬೇಕು.
https://twitter.com/BJP4Karnataka/status/1538395317380427776?s=20&t=tFsrsmOF1nAltU678vI39w
ಕಾಂಗ್ರೆಸ್ ಪಕ್ಷದ ವಂಶವಾಹಿನಿಯಲ್ಲಿ ಹಿಂದು ದಮನ ನೀತಿ ಅಡಗಿದೆಯೇ?ರಾಮ ಹಾಗೂ ರಾಮಸೇತು ಅಸ್ತಿತ್ವವನ್ನು ಕಾಂಗ್ರೆಸ್ ನಿರಾಕರಿಸಿತ್ತು. ಈಗ ರಾಮಾಯಣಕ್ಕೆ ಅಪಮಾನ ಮಾಡಿ ದಕ್ಕಿಸಿಕೊಳ್ಳಲು ಹೊರಟಿದ್ದೀರಾ?ಒಂದು ಸಮುದಾಯದ ಮತ ಗಳಿಕೆಗಾಗಿ ಈ ಮಟ್ಟದ ಓಲೈಕೆಯೇ?
ಕರಾವಳಿ ಭಾಗದಲ್ಲಿ ಕೋಮು-ಸೌಹಾರ್ದತೆ ಕದಡುವುದಕ್ಕೆ ಡಿಕೆಶಿ ಅವರ ದಂಡು ಸಂಚು ರೂಪಿಸುತ್ತಿದೆ. ನಿಮ್ಮ ಆಶಾಡಭೂತಿತನ ಇನ್ನು ನಡೆಯದು.#ಹಿಂದೂವಿರೋಧಿಡಿಕೆಶಿ ಅವರೇ ಮೊದಲು ರಾಜೀನಾಮೆ ನೀಡಿ ಎಂದು ಆಗ್ರಹಿಸಿದೆ.








