ಡಕೋಟಾ ಸರ್ಕಾರ ಶಿಕ್ಷಕರ ಹಿತ ಕಾಪಾಡುತ್ತಿಲ್ಲ : ಕಾಂಗ್ರೆಸ್ Congress saaksha tv
ಬೆಂಗಳೂರು : ಈ ಡಕೋಟಾ ಸರ್ಕಾರ ಶಿಕ್ಷಕರ ಹಿತವನ್ನೂ ಕಾಪಾಡುತ್ತಿಲ್ಲ, ಶಿಕ್ಷಕರ ಕೊರತೆಯನ್ನೂ ನೀಗಿಸುತ್ತಿಲ್ಲ ಎಂದು ರಾಜ್ಯ ಸರ್ಕಾರ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ರಾಜ್ಯಾದ್ಯಂತ ಮೂವತ್ತು ಸಾವಿರ ಶಿಕ್ಷಕರ ಕೊರತೆ ಇದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದರೇ ಈ ಕೊರತೆ ಸುಮಾರು 70 ಸಾವಿರಕ್ಕೆ ಏರಲಿದೆ ಎಂದು ಅಂದಾಜಿಸಲಾಗುತ್ತಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಕರ್ನಾಟಕವನ್ನು ರಾಜಕೀಯ ಪ್ರಯೋಗಶಾಲೆ ಮಾಡಿಕೊಂಡಿರುವ ಬಿಜೆಪಿ, ಸಾಧಕ-ಬಾಧಕಗಳನ್ನು ಚರ್ಚಿಸದೆ ಏಕಾಏಕಿ ಓಇP ಜಾರಿಗೊಳಿಸಲು ಮುಂದಾಗಿದೆ. ಈಗಾಗಲೇ 30 ಸಾವಿರ ಶಿಕ್ಷಕರ ಕೊರತೆ ಇದೆ, ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು.
ಈ ಡಕೋಟಾ ಸರ್ಕಾರ ಶಿಕ್ಷಕರ ಹಿತವನ್ನೂ ಕಾಪಾಡುತ್ತಿಲ್ಲ, ಶಿಕ್ಷಕರ ಕೊರತೆಯನ್ನೂ ನೀಗಿಸುತ್ತಿಲ್ಲ.
ಯುವ ಪೀಳಿಗೆಯನ್ನು ಶಿಕ್ಷಿತರನ್ನಾಗಿಸುವ, ಸ್ವಾವಲಂಬಿಗಳನ್ನಾಗಿಸುವ ಚಿಂತನೆ ಇಲ್ಲದ ಸರ್ಕಾರ ಶೈಕ್ಷಣಿಕ ಕ್ಷೇತ್ರವನ್ನು ಕಡೆಗಣಿಸಿದೆ. ಬಿಜೆಪಿ ಸರ್ಕಾರ ಯುವ ಪೀಳಿಗೆಗೆ ಶಿಕ್ಷಣವನ್ನು ವಂಚಿಸಿ ‘ತ್ರಿಶೂಲ ದೀಕ್ಷೆ’ ‘ಆಕ್ಷನ್ & ರಿಯಾಕ್ಷನ್’ನಂತಹ ತನ್ನ ರಾಜಕೀಯ ಲಾಭದ ಉದ್ದೇಶಗಳಿಗೆ ಬಳಸಿಕೊಳ್ಳುವ ಇರಾದೆ ಹೊಂದಿರುವಂತಿದೆ ಎಂದು ಕಾಂಗ್ರೆಸ್ ಕುಟುಕಿದೆ.