ನಟ ದಳಪತಿ ವಿಜಯ್ (Vijay) ಕೂಡ ರಾಜಕೀಯ ರಂಗ ಪ್ರವೇಶಿಸಲು ಮುದಂದಾಗಿದ್ದು, ನೂತನ ಪಕ್ಷ ಕಟ್ಟುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ನೂತನ ಪಕ್ಷದಿಂದಲೇ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ನಟ ದಳಪತಿ ರಾಜಕೀಯ ರಂಗ ಪ್ರವೇಶಿಸುತ್ತಾರೆ ಎಂಬ ವದಂತಿ ಹಬ್ಬಿತ್ತು. ಇದರ ಬೆನ್ನಲ್ಲಿಯೇ ಸದ್ಯ ಅಧಿಕೃತ ಮಾಹಿತಿ ಲಭ್ಯವಾಗಿದೆ.
ತಮಿಳುನಾಡಿನಲ್ಲಿ ಈಗಾಗಲೇ ಬಿಜೆಪಿ ನೆಲೆಯೂರಲು ಮುಂದಾಗಿದ್ದು, ಅಣ್ಣಾಮಲೈ ನೇತೃತ್ವದಲ್ಲಿ ಭರ್ಜರಿ ತಯಾರಿ ನಡೆದಿದೆ. ಆದರೆ, ಇದರ ಮಧ್ಯೆ ಸಾಕಷ್ಟು ಅಭಿಮಾನಿಗಳು ಹೊಂದಿರುವ ದಳಪತಿ ವಿಜಯ್ ಲೋಕಸಭೆಗೆ ತಯಾರಿ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ.
ನಟ ವಿಜಯ್ ತಂದೆ ರಾಜಕಾರಣಿಯೂ ಆಗಿರುವುದರಿಂದ ಇವರ ಹೆಸರು ಕೂಡ ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತಕ್ಷೇತ್ರವಾರು ಬಹುಮಾನ ಹಂಚಿದ್ದು ಕೂಡ ಈ ಚರ್ಚೆಗೆ ಪುಷ್ಠಿ ನೀಡುತ್ತಿದೆ.