ಡಾರ್ಲಿಂಗ್ ಕೃಷ್ಣನ ಹೊಸ ಸಿನಿಮಾಗೆ ಸಾಥ್ ಕೊಟ್ಟ ರವಿ ಡಿ ಚೆನ್ನಣ್ಣನವರ್..!
ಲವ್ ಮಾಕ್ ಟೇಲ್ ಸಿನಿಮಾಗೂ ಮುನ್ನ ಡಾರ್ಲಿಂಗ್ ಕೃಷ್ಣ ಹಲವು ಸಿನಿಮಾಗಳಲ್ಲಿ ನಟಿಸಿದ್ರೂ ಕೂಡ ಅಷ್ಟಾಗಿ ಆ ಯಾವ ಸಿನಿಮಾಗಳು ಕೂಡ ಕ್ಲಿಕ್ ಆಗಿರಲಿಲ್ಲ. ಆದ್ರೆ ಲಾಕ್ ಡೌನ್ ವೇಳೆ ಡಾರ್ಲಿಂಗ್ ಕೃಷ್ಣ ಮಿಲನ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್ ಸಿನಿಮಾ ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಅಬ್ಬರಿಸಿತ್ತು. ಸೂಪರ್ ಹಿಟ್ ಆಗಿತ್ತು. ಇದಾದ ನಂತರ ಮತ್ತೆ ಥಿಯೇಟರ್ ಗಳು ಆರಂಭವಾದ ಬಳಿಕ ಈ ಸಿನಿಮಾದ ರೆಸ್ಪಾನ್ಸ್ ನೋಡಿ ಥಿಯೇಟರ್ ಗಳಲ್ಲಿ ರೀ ರಿಲೀಸ್ ಕೂಡ ಮಾಡಲಾಗಿತ್ತು. ಅಷ್ಟೇ ಅಲ್ದೇ ಇದೇ ಸಿನಿಮಾದ ಪಾರ್ಟ್ 2 ಕೂಡ ರಿಡಿಯಾಗ್ತಿದೆ.
ಈ ಸಿನಿಮಾ ಮೂಲಕ ಡಾರ್ಲಿಂಗ್ ಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಕೃಷ್ಣ@ಜಿಮೇಲ್.ಕಾಮ್, ಲೋಕಲ್ ಟ್ರೈನ್, ಶುಗರ್ ಫ್ಯಾಕ್ಟರಿ, ವರ್ಜಿನ್, ಲವ್ ಮಿ ಆರ್ ಹೇಟ್ ಮೀ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಅವರ ಮತ್ತೊಂದು ಹೊಸ ಸಿನಿಮಾ ಕೂಡ ಅನೌನ್ಸ್ ಆಗಿದೆ.
ರಶ್ಮಿ ಫಿಲಂಸ್ ಸಂಸ್ಥೆಯಲ್ಲಿ ಸುಮಂತ್ ಕ್ರಾಂತಿ ಈ ಸಿನಿಮಾಗೆ ಬಂಡವಾಳ ಹೂಡ್ತಿದ್ದು, ಸಿನಿಮಾದ ಟೈಟಲ್ ಸೆಪ್ಟೆಂಬರ್ 27 ರಂದು ಸಂಜೆ 6.30ಕ್ಕೆ ರಿವೀಲ್ ಆಗಲಿದೆ. ಇನ್ನೂ ಈ ಸಿನಿಮಾದ ವಿಶೇಷ ಅಂದ್ರೆ ಕರ್ನಾಟಕದ ಹುಲಿ , ದಕ್ಷ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಈ ಸಿನಿಮಾದ ಟೈಟಲ್ ರಿವೀಲ್ ಮಾಡಲಿದ್ದಾರೆ. ಶಿವತೇಜಸ್ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸುತ್ತಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಚಿತ್ರಕ್ಕೆ ಇರಲಿದೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಫೈನಲ್್ ಆಗಿದ್ದಾರೆ ಎನ್ನಲಾಗ್ತಿದೆ.