ಬೆಂಗಳೂರು: ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಗೆ ಇಂದು ಕೂಡ ಜಾಮೀನು ಸಿಗಲಿಲ್ಲ. ಕೋರ್ಟ್ ನಾಳೆಗೆ ವಿಚಾರಣೆ ಮುಂದೂಡಿದೆ.
ದರ್ಶನ್ (Darshan) ಹಾಗೂ ಪವಿತ್ರಾ ಗೌಡರ ಜಾಮೀನು ಅರ್ಜಿ ವಿಚಾರಣೆಯನ್ನು ಅ. 5ಕ್ಕೆ ಕೋರ್ಟ್ ಮುಂದೂಡಿ ಆದೇಶ ನೀಡಿದೆ. ಆರೋಪಿಗಳಾದ ಎ2 ದರ್ಶನ್ ಹಾಗೂ ಎ1 ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆಯು 57ನೇ ಸೆಷನ್ ಕೋರ್ಟ್ನಲ್ಲಿ ನಡೆಯಿತು. ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದರು.
ಮಾಧ್ಯಮಗಳ ಆಧಾರದಲ್ಲಿ ತೀರ್ಪು ನೀಡಬಾರದು ಎಂದು ಮನವಿ ಮಾಡಿದರು. ಚಾರ್ಜ್ ಶೀಟ್, ಸಾಕ್ಷ್ಯಗಳ ಹೇಳಿಕೆಯ ಬಗ್ಗೆ ಗಮನ ಸೆಳೆಯುವ ಯತ್ನ ಮಾಡಿದರು. ಪೊಲೀಸ್ ರಿಕವರಿ ಸ್ವೀಕರಿಸುವಂತಹದ್ದು ಅಲ್ಲ, ಹೇಳಿಕೆಯೂ ಸಹ ಸ್ವಿಕರಿಸುವಂತಹದ್ದಲ್ಲ. ಇಲ್ಲಿ ಸಮಾನ್ಯ ನಿಯಮವನ್ನು ಪೊಲೀಸರು ಅನುಸರಿಸಬೇಕು ಎಂದು ವಾದಿಸಿದ್ದಾರೆ.
ಎಸ್ ಪಿಪಿ ಪ್ರಸನ್ನ ಕುಮಾರ್, ಎಲ್ಲರದ್ದೂ ಮುಗಿದ ಮೇಲೆ ನಾನು ವಾದ ಮಾಡುತ್ತೇನೆ ಎಂದಿದ್ದಾರೆ. ಹೀಗಾಗಿ ಕೋರ್ಟ್ ನಾಳೆಗೆ ವಿಚಾರಣೆ ಮುಂದೂಡಿತು.