ಮತ್ತೊಂದು ದುಬಾರಿ ಕಾರಿನ ‘ಒಡೆಯ’ನಾದ ದರ್ಶನ್..!
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಪರಿಸರ , ಪ್ರಾಣಿ ಪ್ರೇಮದದ ಜೊತೆಗೆ , ಗಾಡಿಗಳ ಮೇಲೂ ಸಾಕಷ್ಟು ಕ್ರೇಜ್ ಇರೋದು ಗೊತ್ತೇ ಇದೆ. ಈಗಾಗಲೇ ದುಬಾರಿ ಕಾರ್ ಗಳನ್ನ ಹೊಂದಿರುವ ಡಿ ಬಾಸ್ ಇದೀಗ ಮತ್ತೊಂದು ಕಾಸ್ಟ್ಲಿ ಕಾರಿನ ಒಡೆಯರಾಗಿದ್ದಾರೆ.
ಹೌದು.. ದರ್ಶನ್ ಮತ್ತೊಂದು ಹೊಸ ಕಾರ್ ಖರೀದಿ ಮಾಡಿದ್ದಾರೆ. ಈಗಾಗಲೇ ಲ್ಯಾಂಬರ್ಗಿನಿ ಉರುಸ್ ಸೇರಿದಂತೆ ಹಲವು ಐಶಾರಾಮಿ ಕಾರುಗಳನ್ನ ಹೊಂದಿರುವ ದಚ್ಚು ಇದೀಗ ಹೊಸದಾಗಿ ಫೋರ್ಡ್ ಎಂಡೊವೆರಾ ಕಾರನ್ನು ಖರೀದಿಸಿದ್ದಾರೆ. ಬಹಳ ಬಲಶಾಲಿಯೂ, ಮಸಲ್ ಲುಕ್ಕನ್ನೂ ಹೊಂದಿರುವ ಈ ಫೋರ್ಡ್ ಎಂಡೊವೆರಾ 150 ಕಾರಿನ ಬೆಲೆ ಸುಮಾರು 50 ಲಕ್ಷ ರೂಪಾಯಿ ಎನ್ನಲಾಗ್ತಿದೆ. ಅಲ್ಲದೇ ಇದು ಸಂಪೂರ್ಣ ಹೊಸ ಮಾದರಿಯ ಕಾರ್ ಆಗಿದೆ.
ಬಿಳಿ ಬಣ್ಣದ ಕಾರಿನ ಫೋಟೋಗಳು , ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ದರ್ಶನ್ ರ ಹೊಸ ಕಾರಿನ ಎಕ್ಸ್ ಶೋರೂಂ ಬೆಲೆ 36 ಲಕ್ಷ ಇದ್ದು, ರಸ್ತೆ ತೆರಿಗೆ, ವಿಮೆ ಸೇರಿ ಸುಮಾರು 50 ಲಕ್ಷ ರೂಪಾಯಿ ಎನ್ನಲಾಗಿದೆ.