ಚಂದನವನದ ಖ್ಯಾತ ನಿರ್ದೇಶಕ ತರುಣ್ ಸುಧೀರ್ (Tarun Sudhir) ಹಾಗೂ ನಟಿ ಸೋನಲ್ (Sonal) ಇಂದು ದಾಂಪತ್ಯ (Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ನೇಹಿತರು, ಸಂಬಂಧಿಕರು, ಆಪ್ತರು ಹಾಗೂ ಸೆಲೆಬ್ರಿಟಿಗಳ ಎದುರು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ತರುಣ್ ಬೇಸರವೊಂದನ್ನು ವ್ಯಕ್ತಪಡಿಸಿದ್ದಾರೆ.
ದರ್ಶನ್ (Darshan) ಮದುವೆಗೆ ಸಿದ್ಧತೆ ಮಾಡಿದ್ದರು. ಆದರೆ, ಈಗ ಅವರು ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಹೀಗಾಗಿ ಅವರು ಮದುವೆಗೆ ಗೈರಾಗಿದ್ದಾರೆ. ದರ್ಶನ್ ಇಲ್ಲದೆ ಮದುವೆ ಮಾಡಿಕೊಂಡಿದ್ದಕ್ಕೆ ತರುಣ್ ಬೇಸರ ವ್ಯಕ್ತಪಡಿಸಿದ್ದಾರೆ.
ಮದುವೆಯ ಈ ಸಂಭ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ತರುಣ್, ಹೊಸ ದಾಂಪತ್ಯ ಜೀವನ ಹುರುಪು, ಸಂತೋಷ ತಂದಿದೆ. ಇಷ್ಟು ದಿನ ಕಾದಿದ್ದಕ್ಕೂ ಉತ್ತಮ ಸಂಗಾತಿಯನ್ನೇ ದೇವರು ನೀಡಿದ್ದಾರೆ. ಎಲ್ಲರೂ ನಮ್ಮ ಕುಟುಂಬದವರಂತೆ ಬಂದು ಹಾರೈಸಿದ್ದಾರೆ. ಮದುವೆಗೆ ದಿನಾಂಕ ಫಿಕ್ಸ್ ಮಾಡಲಾಗಿತ್ತು. ಆನಂತರ ದರ್ಶನ್ ಅವರು ಮದುವೆ ದಿನಾಂಕ ಬದಲಾಯಿಸುವುದು ಬೇಡ ಅಂತಾ ಹೇಳಿದರು. ದರ್ಶನ್ ಹೇಳಿದಂತೆ ಮದುವೆ ಆಗುತ್ತಿದ್ದೇವೆ. ಅವರ ಅನುಪಸ್ಥಿತಿ ಬೇಸರ ತಂದಿದೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮದುವೆ ಭಾನುವಾರ ಬೆಳಿಗ್ಗೆ ನಡೆಯಿತು. ಚಿತ್ರರಂಗದ ಸೆಲೆಬ್ರಿಟಿಗಳು ಸೇರಿದಂತೆ ಹಲವರು ಬಂದು ಶುಭ ಹಾರೈಸಿದ್ದಾರೆ. ತಾಳಿ ಕಟ್ಟುವ ವೇಳೆ ನಟಿ ಸೋನಲ್ ಭಾವುಕರಾಗಿದ್ದರು. ದಶಾವತಾರದ ವಿಷ್ಣುವಿನ ಕಲ್ಯಾಣ ಮಂಟಪ ಎಲ್ಲರನ್ನೂ ಆಕರ್ಷಿಸಿತ್ತು.