ಬೆಂಗಳೂರು: ದರ್ಶನ್ (Darshan) ಆಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ (Renukaswamy Murder Case) ಸಚಿವ ಸಂಪುಟದ ಸಭೆಯಲ್ಲಿಯೂ (Cabinet Meeting) ಚರ್ಚೆಯಾಗಿದೆ ಎನ್ನಲಾಗಿದೆ.
ಪ್ರಕರಣದ ಕುರಿತು ಯಾರು ಮಾತನಾಡಬೇಡಿ. ಅನಗತ್ಯವಾಗಿ ಯಾರೂ ಮಾತನಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಖಡಕ್ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.
ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸರು ನೀಡಿದ ಹತ್ಯೆಯ ದೃಶ್ಯಾವಳಿ ಪ್ರಸ್ತಾಪಿಸಿ ಈ ರೀತಿಯ ಕ್ರೂರತನ ನಾನು ನೋಡಿಯೇ ಇಲ್ಲ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಕರಣದ ಕುರಿತು ಪರ – ವಿರೋಧ ಸೇರಿದಂತೆ ಯಾವ ಚರ್ಚೆಯನ್ನೂ ಮಾಡಬೇಡಿ. ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಸಂಪುಟ ಸಭೆಯ ಆರಂಭದಲ್ಲಿಯೇ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.