ದಾಸವರೇಣ್ಯ ಶ್ರೀ ವಿಜಯದಾಸರು ಚಿತ್ರಕ್ಕೆ ಮುಹೂರ್ತ – ಶಾಸಕ ಶಿವನಗೌಡ ನಾಯಕ್, ಪಂಡಿತ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ ಚಾಲನೆ

1 min read
Dasavarenya Sri Vijayadasa film team saakshatv

ದಾಸವರೇಣ್ಯ ಶ್ರೀ ವಿಜಯದಾಸರು ಚಿತ್ರಕ್ಕೆ ಮುಹೂರ್ತ – ಶಾಸಕ ಶಿವನಗೌಡ ನಾಯಕ್, ಪಂಡಿತ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ ಚಾಲನೆ

Dasavarenya Sri Vijayadasa film saakshatvಮಹಾಮಹಿಮರಾದ ಶ್ರೀ ವಿಜಯದಾಸರ ಕುರಿತಾದ “ದಾಸವರೇಣ್ಯ ಶ್ರೀ ವಿಜಯದಾಸರು” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನಡೆಯಿತ್ತು.

ಮೊದಲ ಸನ್ನಿವೇಶಕ್ಕೆ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಪಂಡಿತ ಪೂಜ್ಯ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ ಆರಂಭ ಫಲಕ ತೋರಿದರು. ದೇವದುರ್ಗದ ಶಾಸಕರಾದ ಶಿವನಗೌಡ ನಾಯಕ್ ಕ್ಯಾಮೆರಾ ಚಾಲನೆ ಮಾಡಿದರು. ವಿಜಯ ದಾಸರ ಪೂರ್ವಾರಾಧನೆ ದಿನದಂದು ಚಿತ್ರೀಕರಣ ಆರಂಭವಾಗಿದ್ದು ವಿಶೇಷ.
ನಾನು ಈ ಹಿಂದೆ ಜಗನ್ನಾಥದಾಸರು ಎಂಬ ಚಲನಚಿತ್ರ ನಿರ್ದೇಶಿಸಿದ್ದೆ. ಮತ್ತೊಬ್ಬ ದಾಸವರೇಣ್ಯರಾದ ಪ್ರಸನ್ನವೆಂಕಟದಾಸರ ಕುರಿತಾದ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗ ವಿಜಯದಾಸರ ಕುರಿತ ಸಿನಿಮಾಕ್ಕೆ ಅವರ ಆರಾಧನೆಯ ಪೂರ್ವಕಾಲದಲ್ಲೇ ಚಾಲನೆ ದೊರೆಕಿದೆ. ಈ ಚಿತ್ರದ ಚಿತ್ರೀಕರಣ ಕನಕದುರ್ಗ, ಆನೆಗುಂದಿ ಹಾಗೂ ನವಬೃಂದಾವನದ ಸುತ್ತಮುತ್ತ ನಡೆಯಲಿದೆ. ನನ್ನ ಹಿಂದಿನ ಸಿನಿಮಾದಲ್ಲಿದ್ದ Dasavarenya Sri Vijayadasafilm team saakshatvಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲೂ ಇರುತ್ತಾರೆ. ಸುಮಾರು 250 ವರ್ಷಗಳ ಹಿಂದಿನ ಜೀವನವನ್ನು ತೋರಿಸುವಾಗ ತುಂಬಾ ಜಾಗುರಾಕರಾಗಿರಬೇಕು. ಆ ನಿಟ್ಟಿನಲ್ಲಿ ನಮ್ಮ ತಂಡದ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಚಿತ್ರ ಉತ್ತಮವಾಗಿ ಬರುವಲ್ಲಿ ಶ್ರಮ ಪಡುತ್ತೇನೆ. ನಿಮ್ಮ ಸಹಕಾರವಿರಲಿ ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ಹೇಳಿದ್ದಾರೆ.

ನಾನು ಮೂಲತಃ ರಾಯಚೂರಿನವನು. ಹಾಗಾಗಿ ವಿಜಯದಾಸರ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ಇಂದಿನ ಯುವಪೀಳಿಗೆಗೆ ದಾಸರ ಜೀವನದ ಕುರಿತು ತಿಳಿಸುವುದಕ್ಕೆ ಇದು ಉತ್ತಮ ಮಾಧ್ಯಮ. ನನ್ನ ಪೂಜ್ಯ ತಾಯಿ,ತಂದೆಯವರಾದ ಶ್ರೀಮತಿ ಸರಸ್ವತಿ ಹಾಗೂ ಶ್ರೀಪ್ರಹ್ಲಾದಾಚಾರ್ಯ ಜೋಷಿ ಅವರ ಹೆಸರಿನಲ್ಲಿ ಎಸ್ ಪಿ ಜೆ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ವಿಜಯದಾಸರ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ನಮ್ಮ ಚಿತ್ರಕ್ಕೆ ಹಾರೈಸಲು ಬಂದಿರುವ ಪಂಡಿತ ಶ್ರೀಸತ್ಯಧ್ಯಾನಾಚಾರ್ಯ ಕಟ್ಟಿ ಅವರಿಗೆ ಹಾಗೂ ಶಾಸಕರಾದ ಶಿವನಗೌಡ ನಾಯಕ್ ಅವರಿಗೆ ಅನಂತ ವಂದನೆಗಳು ಎಂದರು ನಿರ್ಮಾಪಕ ಹಾಗೂ ನಟ ತ್ರಿವಿಕ್ರಮ ಜೋಷಿ.

Dasavarenya Sri Vijayadasa  film team saakshatvವಿಜಯದಾಸರ ಆರಾಧನೆ ಸಮಯದಲ್ಲಿ ಈ ಚಿತ್ರ ಆರಂಭವಾಗಿದೆ. ಕನ್ನಡ ಸಾಹಿತ್ಯವನ್ನು ಅನೇಕ ಶತಮಾನದಿಂದ ಹರಿದಾಸರು ಶ್ರೀಮಂತಗೊಳಿಸಿದ್ದಾರೆ. ದಾಸರ ಕೊಡುಗೆಯನ್ನು ಹೊರತರುವ ಪ್ರಯತ್ನ. ಇನ್ನೂ ಹೆಚ್ಚು ನಡೆಯಬೇಕು ಎಂದು ಪಂಡಿತ ಸತ್ಯಧ್ಯಾನಾಚಾರ್ಯ ಕಟ್ಟಿ ತಿಳಿಸಿದರು.

ಶಾಸಕರಾದ ಶಿವನಗೌಡ ನಾಯಕ್, ಸೌಂಡ್ ಆಫ್ ಮ್ಯೂಸಿಕ್ ನ ಗುರುರಾಜ್, ಜೆ.ಎಂ.ಪ್ರಹ್ಲಾದ್, ಗಾಯಕ ಹುಸೇನ್ ಸಾಹೇಬ್ ದಾಸ್ , ವಿಷ್ಣು ಹಯಗ್ರೀವ ಹಾಗೂ ಡಾ||ವಾಸುದೇವ ಅಗ್ನಿಹೋತ್ರಿ ಸೇರಿದಂತೆ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಮಧುಸೂದನ್ ಹವಾಲ್ದಾರ್ ಅವರ ಪರಿಕಲ್ಪನೆ ನಿರ್ದೇಶನವಿರುವ ಈ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಚಿತ್ರಕಥೆ, ಬರೆದಿದ್ದಾರೆ. ವಿಜಯಕೃಷ್ಣ ಸಂಗೀತ ನಿರ್ದೇಶನ ಹಾಗೂ ನಾರಾಯಣ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯದಾಸರ ಪಾತ್ರದಲ್ಲಿ ತ್ರಿವಿಕ್ರಮ ಜೋಷಿ ಅಭಿನಯಿಸುತ್ತಿದ್ದಾರೆ. ಶರತ್ ಜೋಷಿ, ಪ್ರಭಂಜನ ದೇಶಪಾಂಡೆ, ವಿಷ್ಣು ತೀರ್ಥ ಜೋಷಿ, ಪದ್ಮಕಲಾ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd