ಅತ್ತೆ ಬಿಸಿಯೂಟ ಹಾಕಲ್ಲ… ಸದಾ ಟಿವಿ ನೋಡ್ತಾರೆ ಅಂತ ಪೊಲೀಸರನ್ನೇ ಮನೆಗೆ ಕರೆಸಿಕೊಂಡ ಸೊಸೆ..!
ಉತ್ತರಪ್ರದೇಶ : ಅತ್ತೆಯ ವರ್ತನೆಯಿಂದ ಬೇಸತ್ತು ನವವಿವಾಹಿತೆಯೊಬ್ಬಳು ಪೊಲೀಸರಿಗೆ ಕರೆ ಮಾಡಿ ಮನೆಗೆ ಕರೆಸಿದ ವಿಚಿತ್ರ ಘಟನೆ ಉತ್ತರಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ. ಅತ್ತೆಯಿಂದ ನನಗೆ ರಕ್ಷಣೆ ಕೊಡಿ ಕೇಳಿಕೊಂಡಿರುವ ಸೊಸೆ ಕೊಟ್ಟ ವಿಚಿತ್ರ ಕಾರಣ ಕೇಳಿದ್ರೆ ಶಾಕ್ ಆಗುತ್ತೆ.
ಹೌದು… ಈಕೆ ಹೇಳೋ ಪ್ರಕಾರ ಅತ್ತೆಗೆ ವಿಪರೀತ ಟಿವಿ ಹುಚ್ಚಿದ್ಯಂತೆ. ಇದರಿಂದ ಅತ್ತೆ ಬಿಸಿಬಿಸಿ ಅಡಿಗೆ ಮಾಡಿಕೊಡದೇ ದಿನವೂ ತಂಗಳನ್ನ ತಿನ್ನಬೇಕು. ನನ್ನ ಆರೋಗ್ಯ ಕೆಡುತ್ತಿದೆ. ಅತ್ತೆಗೆ ಬುದ್ಧಿ ಹೇಳಿ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾಳೆ.
ಇತ್ತ ಅತ್ತೆ ಸೊಸೆಯ ಆರೋಪವನ್ನ ತಳ್ಳಿ ಹಾಕಿದ್ದು, ಆಕೆಗೆ ನಾನು ಪ್ರತಿ ದಿನ ಅಡುಗೆ ಮಾಡಿ ನೀಡುತ್ತಿದ್ದೇನೆ. ಸೊಸೆಯ ತಲೆ ಸರಿಯಿಲ್ಲ. ಆಕೆ ಸದಾ ಮೊಬೈಲ್ ನಲ್ಲಿ ಬ್ಯಸಿಯಾಗಿರುತ್ತಾಳೆ ಎಂದಿದ್ಧಾರೆ.
ಈ ನಡುವೆ ಅತ್ತೆ ಮಾತನಾಡಿದ್ರೆ ಮದ್ಯದಲ್ಲಿ ಸೊಸೆ ವಾಗ್ವಾದಕ್ಕೆ ಇಳಿಯೋದು. ಸೊಸೆ ಮಾತನಾಡಿದ್ರೆ ಅತ್ತೆ ವಾಗ್ವಾದಕ್ಕಿಳಿಯೋದು. ಹೀಗೆ ಇಬ್ಬರ ಜಗಳದ ನಡುವೆ ಪೊಲೀಸೆರಿಗೆ ತಲೆಬಿಸಿಯಾಗಿದ್ದು ಮಾತ್ರ ವಿಪರ್ಯಾಸ.
ಅಂದ್ಹಾಗೆ ಗಂಡ ದೂರದಲ್ಲಿ ಕೆಲಸದಲ್ಲಿ ಬ್ಯುಸಿಯಾಗಿದ್ದು ಅಲ್ಲೇ ಉಳಿದುಕೊಂಡಿದ್ದಾನಂತೆ. ಇದ್ರಿಂದ ಅತ್ತೆ ಸೊಸೆಯ ಜಗಳ ರಾಮಾಯಣ ದಿನವೂ ಕಾಮನ್ ಆಗಿದೆ ಎಂದು ನೆರೆಹೊರೆಯವರು ಆರೋಪ ಮಾಡಿದ್ದಾರೆ. ಸದ್ಯ ಪೊಲೀಸರು ಇಬ್ಬರನ್ನೂ ಕೂರಿಸಿ ಹೊಂದಾಣಿಕೆಯಿಂದ ಇರುವಂತೆ ಬುದ್ದಿವಾದ ಹೇಳಿ ಅಲ್ಲಿಂದ ಹೊರಟಿದ್ದಾರೆ.
ನಡುರಸ್ತೆಯಲ್ಲೇ ಪತ್ನಿ ಕಾಲು ಹಿಡಿದು ನನ್ನ ಬಿಟ್ಟು ಹೋಗಬೇಡ… ಅಂದ್ರು ಕೇಳದೇ ಪ್ರಿಯಕರನ ಜೊತೆ ಜಂಪಾದ್ಲು ..!
ವೃದ್ಧ ತಾಯಿಗೆ ನಡುರಸ್ತೆಯಲ್ಲೇ ಕಪಾಳಕ್ಕೆ ಹೊಡೆದ ಮಗ : ಸ್ಥಳದಲ್ಲೇ ತಾಯಿ ಸಾವು – ಭಯಾನಕ ವಿಡಿಯೋ ವೈರಲ್..!
ಕೆಟ್ಟ ತಾಯಿ ಇರಲ್ಲಾ ಅನ್ನೋ ಮಾತನ್ನೇ ಸುಳ್ಳು ಅಂತ ಸಾಬೀತು ಮಾಡಿದ್ದಾಳೆ ಈ ನೀಚ ತಾಯಿ..!
ಆನ್ ಲೈನ್ ಗ್ರಾಹಕರೇ ಎಚ್ಚರ..! ಮೊಬೈಲ್ ಬದಲಿಗೆ ಸೋಪ್ ಬರಬಹುದು..!