ಕೈ ನಾಯಕರನ್ನ ಬಿಜೆಪಿಗೆ ಆಹ್ವಾನಿಸಿ “ಡಿಕೆಶಿಗೆ ಬೈರತಿ ಡಿಚ್ಚಿ”
ದಾವಣಗೆರೆ : ವಲಸೆ ಬಂದ ನಾಯಕರೆಲ್ಲರೂ ಕಮಲದ ಚಿಹ್ನೆಯಡಿ ನೆಮ್ಮದಿಯಾಗಿದ್ದೇವೆ. ನಾವು ಕಾಂಗ್ರೆಸ್ ನಲ್ಲಿರುವ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳನ್ನು ಸೆಳೆಯುತ್ತೇವೆ ಎಂದು ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೇರಲಿಚ್ಚುವವರು ಅಪ್ಲಿಕೇಶನ್ ಹಾಕಬಹುದು ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿಕೆ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕರೆಯುತ್ತೇನೆ ಕಾಂಗ್ರೆಸ್ ನವರು ಯಾರೆ ಇದ್ದರು ಬರಬಹುದು. ಕೆಪಿಸಿಸಿ ಅಧ್ಯಕ್ಷರು ಬಿಜೆಪಿಯವರನ್ನು ಸೆಳೆಯಲು ಆಹ್ವಾನ ಮಾಡಿದ್ದು, ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೇ ನಾವು ಕಾಂಗ್ರೆಸ್ಸಿಗರನ್ನು ಸೆಳೆಯುತ್ತೇವೆ ಎಂದು ಟಾಂಗ್ ನೀಡಿದರು.
ಇನ್ನು ಬಿಜೆಪಿಯಲ್ಲಿ ನಾವು 17 ಶಾಸಕರು ಸಂತೋಷದಿಂದ ನೆಮ್ಮದಿಯಾಗಿದ್ದೇವೆ. ಕಮಲದ ಚಿಹ್ನೆಯಡಿ ಬಂದ ನಾವು ನೆಮ್ಮದಿಯಾಗಿ ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾದ ನಂತರ 17 ಬಾರಿ ಜಿಲ್ಲೆಗೆ ಬಂದಿದ್ದೇನೆ, ಮುಂದೆ 10 ದಿನಗಳಿಗೊಮ್ಮೆ ದಾವಣಗೆರೆ ಜಿಲ್ಲೆಗೆ ಬರುತ್ತೇನೆ. ನಗರ ಪ್ರದೇಶ ಬಿಟ್ಟು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡುತ್ತೇವೆ. ಗ್ರಾಮಗಳಲ್ಲಿನ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ದಿನೇಶ್ ಗುಂಡೂರಾವ್ ಸಿಎಂ ರಾಜೀನಾಮೆಗೆ ಒತ್ತಾಯ ವಿಚಾರಕ್ಕೆ ಮಾತನಾಡಿ, ದಿನೇಶ್ ಗುಂಡೂರಾವ್ ಅವರದು ಏರ್ ಪೋರ್ಟ್ ರೋಡ್ ನಲ್ಲಿ ಜಮೀನು ಹಗರಣವಾಗಿತ್ತು. ಸಾಧರಹಳ್ಳಿ ಗೇಟ್ ನಲ್ಲಿ ಜಮೀನು ಹಗರಣವಾಗಿತ್ತು. ಆಗ ಇದ್ದ ಬಿಜೆಪಿ ಸರ್ಕಾರ ದಿನೇಶ್ ಗುಂಡೂರಾವ್ ಅವರ ರಾಜೀನಾಮೆ ಕೇಳಿದ್ರು ಅವರು ಕೊಟ್ಟಿದ್ದಾರಾ..? ಭ್ರಷ್ಟಾಚಾರ ಆಗಿದ್ರೆ ದಾಖಲಿ ಬಿಡುಗಡೆ ಮಾಡಿ ಬಳಿಕ ಕೇಳಲಿ ಎಂದು ಹೇಳಿದರು.