ನವದೆಹಲಿ: ಭಯೋತ್ಪಾದಕ ದಾವೂದ್ ಇಬ್ರಾಹಿಂ ಬಾಲ್ಯದ ಮನೆ ಹಾಗೂ ಆತನ ಕುಟುಂಬದವರ ಒಡೆತನದ ಇನ್ನಿತರ ಮೂರು ಆಸ್ತಿಗಳನ್ನು ಹರಾಜು ಹಾಕಲು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಭಯೋತ್ಪಾದಕ ದಾವೂದ್ ಇಬ್ರಾಹಿಂನ (Dawood Ibrahim) ಬಾಲ್ಯದ ಮನೆ ಮತ್ತು ಆತನ ಕುಟುಂಬದ ಒಡೆತನದ ಇತರ ಮೂರು ಆಸ್ತಿಗಳನ್ನು ಹರಾಜು ಹಾಕಲು ಮುಂದಾಗಲಾಗಿದೆ.
ಮಹಾರಾಷ್ಟ್ರದ ರತ್ನಗಿರಿಯಲ್ಲಿನ ಸ್ಮಗ್ಲರ್ಸ್ ಮತ್ತು ಫಾರಿನ್ ಎಕ್ಸ್‌ಚೇಂಜ್ ಮ್ಯಾನಿಪ್ಯುಲೇಟರ್ಸ್ (ಆಸ್ತಿ ಮುಟ್ಟುಗೋಲು) ಕಾಯಿದೆ (SAFEMA) ಅಡಿಯಲ್ಲಿ ಅಧಿಕಾರಿಗಳು ಆಸ್ತಿ ವಶಕ್ಕೆ ಪಡೆದಿದ್ದಾರೆ. ಜ. 5ರಂದು ಈ ಆಸ್ತಿ ಹರಾಜು ಹಾಕಲಾಗುತ್ತಿದೆ. ಈಗಾಗಲೇ ಆತನ ಕುಟುಂಬಕ್ಕೆ ಸೇರಿದ 11 ಆಸ್ತಿಗಳನ್ನು ಹರಾಜು ಮಾಡಲಾಗಿದೆ. 4.53 ಕೋಟಿ ರೂ.ಗೆ ರೆಸ್ಟೋರೆಂಟ್, 3.53 ಕೋಟಿ ರೂ. ಆರು ಫ್ಲಾಟ್‌ಗಳು, 3.52 ಕೋಟಿ ರೂ.ಗೆ ಅತಿಥಿ ಗೃಹ ಕೂಡ ಮಾರಾಟ ಮಾಡಲಾಗಿದೆ.
1993 ರ ಮುಂಬಯಿ ಸರಣಿ ಸ್ಫೋಟದ ಆರೋಪಿ 198 ರಲ್ಲಿ ಮುಂಬಯಿಗೆ ತೆರಳುವ ಮೊದಲು ಮುಂಬಾಕೆ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ. ಈದ 257 ಜನರ ಸಾವಿಗೆ ಕಾರಣವಾದ ಸರಣಿ ಬಾಂಬ್ ಸ್ಫೋಟದ ನಂತರ ಭಾರತ ತೊರೆದು ತಲೆಮರೆಸಿಕೊಂಡಿದ್ದ. ಆತನ ನಡೆಸಿದ್ದ ದಾಳಿಯಿಂದಾಗಿ 257 ಜನ ಸಾವನ್ನಪ್ಪಿ, 700ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಅಂದಾಜು 27 ಕೋಟಿ ರೂ. ಮೌಲ್ಯದ ಆಸ್ತಿ ನಾಶವಾಗಿತ್ತು.








