DC Vs GG WPL 2023 : ಇಂದು ಗುಜರಾತ್ ಸೋತರೇ ಪ್ಲೇ ಆಫ್ ಹಾದಿ ಕಷ್ಟ ಸಾಧ್ಯ….
ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಲ್ಲಿ ಇಂದು ಗುಜರಾತ್ ಜೈಂಟ್ಸ್ ವಿರುದ್ಧ ಸೆಣಸಲಿದೆ. ಇದುವರೆಗೂ ಎರಡೂ ತಂಡಗಳು 3 ಪಂದ್ಯಗಳನ್ನ ಆಡಿದ್ದು ಈ ಪೈಕಿ ಗುಜರಾತ್ ಒಂದರಲ್ಲಿ ಮತ್ತು ದೆಹಲಿ ಎರಡರಲ್ಲಿ ಗೆಲುವು ಸಾಧಿಸಿದೆ. ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಗುಜರಾತ್‌ಗೆ ಇಂದಿನ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಪಂದ್ಯ ಶುರುವಾಗುವ ಸಮಯ 7:30
ಬೆತ್ ಮೂನಿ ಅಲಭ್ಯ
ಗುಜರಾತ್ ತಂಡದ ಮಾಜಿ ನಾಯಕಿ ಹಾಗೂ ಸ್ಟಾರ್ ಬ್ಯಾಟರ್ ಬೆತ್ ಮೂನಿ ಇಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಆಕೆ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಸ್ನೇಹ ರಾಣಾ ನಾಯಕತ್ವ ವಹಿಸಲಿದ್ದಾರೆ.
ಗುಜರಾತ್ ಗೆ ಮಹತ್ವದ ಪಂದ್ಯ
ಈ ಪಂದ್ಯ ಗುಜರಾತ್ ಗೆ ನಾಕೌಟ್ ಹಂತಕ್ಕಿಂತ ಕಡಿಮೆ ಏನಲ್ಲ. ಏಕೆಂದರೆ ಗುಜರಾತ್ 3 ಪಂದ್ಯಗಳಲ್ಲಿ ಒಂದೇ ಒಂದು ಗೆಲುವಿನ ಮೂಲಕ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಸೋತರೆ ಗುಜರಾತ್ ಮುಂದಿನ 4 ಪಂದ್ಯಗಳಲ್ಲಿ 4 ರಲ್ಲಿಯೂ ಗೆಲ್ಲಲೇಬೇಕಾದ ಒತ್ತಡ ಬೀಳಲಿದೆ.
ಮುಂಬೈ 6 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅದೇ ಸಮಯದಲ್ಲಿ ಡೆಲ್ಲಿ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿ ಗೆಲುವು ಸಾಧಿಸಿದರೆ ಮುಂಬೈ ಜೊತೆಗೆ 6 ಅಂಕ ಗಳಿಸಿ ತಂಡ ಎರಡನೇ ಸ್ಥಾನದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.
ಪಿಚ್ ವರದಿ
ಡಿ ವೈ ಪಾಟೀಲ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 151 ಆಗಿರುವುದೇ ಸಾಕ್ಷಿ.
ಎರಡೂ ತಂಡಗಳ ಪ್ಲೇಯಿಂಗ್ XI ಈ ರೀತಿ ಇದೆ.
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ಕ್ಯಾಪ್ಟನ್), ಶಫಾಲಿ ವರ್ಮಾ, ಮರಿಯನ್ ಕಪ್, ಜೆಮಿಮಾ ರೋಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಮಿನ್ನು ಮಣಿ, ಶಿಖಾ ಪಾಂಡೆ, ರಾಧಾ ಯಾದವ್ ಮತ್ತು ತಾರಾ ನಾರ್ರಿಸ್.
ಗುಜರಾತ್ ಜೈಂಟ್ಸ್: ಸ್ನೇಹ ರಾಣಾ (ನಾಯಕ), ಹರ್ಲೀನ್ ಡಿಯೋಲ್, ಸಬ್ಬಿನೇನಿ ಮೇಘನಾ, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ದಯಾಲನ್ ಹೇಮಲತಾ, ಸೋಫಿಯಾ ಡಂಕ್ಲೆ, ತನುಜಾ ಕನ್ವರ್, ಅನ್ನಾಬೆಲ್ ಸದರ್ಲ್ಯಾಂಡ್, ಮಾನಸಿ ಜೋಶಿ, ಆಶ್ಲೇ ಗಾರ್ಡನರ್ ಮತ್ತು ಕಿಮ್ ಗಾರ್ತ್.
DC Vs GG WPL 2023 : If Gujarat loses today, play off path will be difficult….