DC vs RR Match | ಹೆಡ್ ಟು ಹೆಡ್ ರೆಕಾರ್ಡ್..

1 min read
DC vs RR Head to Head Records saaksha tv

DC vs RR Head to Head Records saaksha tv

DC vs RR Match | ಹೆಡ್ ಟು ಹೆಡ್ ರೆಕಾರ್ಡ್..

ಐಪಿಎಲ್ ನ 34ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯಲಿರುವ ಈ ಪಂದ್ಯ ಭಾರಿ ಜಿದ್ದಾಜಿದ್ದಿನಿಂದ ಕೂಡಿರಲಿದೆ.   

ಐಪಿಎಲ್ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಆರನೇ ಸ್ಥಾನದಲ್ಲಿದ್ದರೇ ರಾಜಸ್ಥಾನ್ ರಾಯಲ್ಸ್ ತಂಡ ಮೂರನೇ ಸ್ಥಾನದಲ್ಲಿದೆ. 15ನೇ ಸೀಸನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರು ಪಂದ್ಯಗಳನ್ನಾಡಿದ್ದು, ಮೂರು ಪಂದ್ಯಗಳನ್ನು ಗೆದ್ದುಕೊಂಡಿದ್ದು, ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ರಾಜಸ್ಥಾನ್ ರಾಯಲ್ಸ್ ತಂಡ ಆರು ಪಂದ್ಯಗಳನ್ನಾಡಿದ್ದು, ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್ ಗಳಿಂದ ಗೆಲುವು ಕಂಡಿದೆ. ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಿದ್ದು, 7 ರನ್ ಗಳಿಂದ ಗೆಲುವು ಸಾಧಿಸಿದೆ.

 ಸಂಜು ಸ್ಯಾಮ್ ಸನ್ ನಾಯಕತ್ವದ ರಾಜಸ್ಥಾನಕ್ಕೆ ಬ್ಯಾಟಿಂಗ್ ಭಯವಿಲ್ಲ. ಆರೇಂಜ್ ಕ್ಯಾಪ್ ವಿನ್ನರ್ ಜೋಸ್ ಬಟ್ಲರ್ ಪವರ್ ಪ್ಲೇ ಮತ್ತು ಮಧ್ಯಮ ಓವರ್ನಲ್ಲಿ ಪವರ್ ಹಿಟ್ ತೋರಿಸಿದ್ದಾರೆ.  ದೇವದತ್ ಪಡಿಕಲ್, ಸಂಜು ಸ್ಯಾಮ್ಸನ್ ನಿಜವಾದ ಸಾಮರ್ಥ್ಯ ತೋರಿಸಿಲ್ಲ. ಕರುಣ್ ನಾಯರ್ ಗೆ ಅವಕಾಶ ಸಿಕ್ಕಿಲ್ಲ. ರಿಯಾನ್ ಪರಾಗ್ ಕೊನೆಯಲ್ಲಿ ಸ್ಥಿರತೆ ತೋರಿಸಿಲ್ಲ. ಬೌಲಿಂಗ್ನಲ್ಲಿ ರಾಯಲ್ಸ್ ಸೂಪರ್ ಆಗಿದ್ದು, ಟ್ರೆಂಟ್ ಬೋಲ್ಟ್ ಮತ್ತು ಪ್ರಸಿಧ್ ಕೃಷ್ಣ ಆರಂಭದಲ್ಲೇ ವಿಕೆಟ್ ಪಡೆದು ಒತ್ತಡ ಹಾಕುತ್ತಿದ್ದಾರೆ. ಅಶ್ವಿನ್ ಮತ್ತು ಚಹಲ್ ಜೋಡಿ ರನ್ ಗೆ ಕಡಿವಾಣದ ಜೊತೆಗೆ ವಿಕೆಟ್ ಬೇಟೆಯಾಡುತ್ತಿದ್ದಾರೆ.

DC vs RR Head to Head Records saaksha tv
DC vs RR Head to Head Records saaksha tv

ಡೆಲ್ಲಿ ತಂಡದಲ್ಲಿ  ಡೇವಿಡ್ ವಾರ್ನರ್ ಮತ್ತು ಪೃಥ್ವಿ ಷಾ ಆಟ ನಿರ್ಣಾಯಕ. ಆದ್ರೆ ಡೆಲ್ಲಿಗೆ ಮಿಡಲ್ ಆರ್ಡರ್ ಸಮಸ್ಯೆ ಇದೆ. ರಿಷಬ್ ಪಂತ್, ಸರ್ಫರಾಜ್ ಖಾನ್, ರೋವ್ಮನ್ ಪೊವೆಲ್ ಸಾಮರ್ಥ್ಯಕ್ಕೆ ತಕ್ಕ ಆಟ ಆಡಬೇಕಿದೆ. ಲಲಿತ್ ಯಾದವ್, ಅಕ್ಸರ್ ಪಟೇಲ್ ಮತ್ತು ಶಾರ್ದೂಲ್ ಥಾಕೂರ್ ಬೌಲಿಂಗ್ ಆಲ್ರೌಂಡರ್ಗಳಾದರೂ ಬ್ಯಾಟಿಂಗ್ ನಲ್ಲೂ ಮಿಂಚಬಲ್ಲರು.  ಡೆಲ್ಲಿ ಬೌಲಿಂಗ್ ನಲ್ಲಿ ಮುಸ್ತಾಫಿಝುರ್ ರೆಹಮಾನ್, ಶಾರ್ದೂಲ್ ಮತ್ತು ಖಲೀಲ್ ಅಹ್ಮದ್ ತಮ್ಮ ಕೆಲಸ ಮಾಡುತ್ತಿದ್ದಾರೆ. ಅಕ್ಸರ್ ಮತ್ತು ಕುಲ್ ದೀಪ್ ಸ್ಪಿನ್ ಬಲೆ ಹೆಣೆದಿದ್ದಾರೆ.

ಇಂಡಿಯಲ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಈ ಎರಡು ತಂಡಗಳು ಈವರೆಗೂ 24 ಬಾರಿ ಮುಖಾಮುಖಿ ಆಗಿವೆ. ಈ ಪೈಕಿ ಉಭಯ ತಂಡಗಳು ತಲಾ 12 ಬಾರಿ ಗೆಲುವು ಸಾಧಿಸಿವೆ.

ಆದ್ರೆ ಕಳೆದ ಐದು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೇಲು ಗೈ ಸಾಧಿಸಿದೆ. ಐದು ಪಂದ್ಯಗಳಲ್ಲಿ ಡೆಲ್ಲಿ ತಂಡ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ರಾಯಲ್ಸ್ ತಂಡ 1 ಪಂದ್ಯದಲ್ಲಿ ಗೆದ್ದಿದೆ.  ಕಳೆದ ಬಾರಿಯ ಐಪಿಎಲ್ ನಲ್ಲಿ ತಲಾ ಒಂದೊಂದು ಪಂದ್ಯ ಗೆದ್ದಿವೆ. 

ಇನ್ನು ಮೊದಲು ಬ್ಯಾಟಿಂಗ್ ಮಾಡಿದಾಗ ಡೆಲ್ಲಿ 7 ಪಂದ್ಯಗಳಲ್ಲಿ ಗೆದ್ದರೇ, ರಾಯಲ್ಸ್ 5 ಪಂದ್ಯದಲ್ಲಿ ಗೆದ್ದಿದೆ.

ಸೆಕೆಂಡ್ ಬ್ಯಾಟಿಂಗ್ ಮಾಡಿದಾಗ ಡೆಲ್ಲಿ 5 ಪಂದ್ಯಗಳಲ್ಲಿ ಗೆದ್ದರೇ ಆರ್ ಆರ್ 7 ಬಾರಿ ಗೆಲುವು ಸಾಧಿಸಿದೆ.

DC vs RR Head to Head Records

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd