ಉತ್ತರ ಕರ್ನಾಟಕದವರೇ ಮುಂದಿನ ಸಿಎಂ : ಅಶ್ವಥ್ ನಾರಾಯಣ್ ಹೇಳಿದ್ದೇನು..?
ಧಾರವಾಡ : ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ, ಈಗ ಬದಲಾವಣೆಯ ಚರ್ಚೆಯೂ ಇಲ್ಲ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಆದಲ್ಲಿ ಮುಂದಿನ ಸಿಎಂ ಉತ್ತರ ಕರ್ನಾಟಕದವರೇ ಆಗುತ್ತಾರೆ ಎನ್ನುವ ಸಚಿವ ಉಮೇಶ ಕತ್ತಿ ಹೇಳಿಕೆಗೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಅಶ್ವಥ್ ನಾರಾಯಣ್, ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ, ಈಗ ಬದಲಾವಣೆಯ ಚರ್ಚೆಯೂ ಇಲ್ಲ.
ಯಡಿಯೂರಪ್ಪನವರೇ ಈಗ ಸಿಎಂ ಆಗಿದ್ದಾರೆ. ಸಿಎಂ ಸ್ಥಾನ ಈಗ ಭರ್ತಿಯಾಗಿಯೇ ಇದೆ, ಅವರೇ ಮುಂದುವರೆಯುತ್ತಾರೆ. ಅವರು ಸಿಎಂ, ಇವರು ಸಿಎಂ ಎನ್ನುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ನಮ್ಮಲ್ಲಿ ಸಂಪೂರ್ಣ ಒಗ್ಗಟ್ಟಿದೆ ಎಂದಿದ್ದಾರೆ.
ಇದೇ ವೇಳೆ ಕೆಆರ್ ಎಸ್ ನಲ್ಲಿ ಯಾವುದೇ ಬಿರುಕಿಲ್ಲ ಎಂದು ಸ್ಪಷ್ಟಪಡಿಸಿದ ಡಿಸಿಎಂ, ಸುಮಲತಾ-ಹೆಚ್ ಡಿಕೆ ವಾಕ್ ಸಮರ ಈಗಾಗಲೇ ಮುಗಿದು ಹೋಗಿರುವ ಅಧ್ಯಾಯ, ಅವರ ಮಧ್ಯೆ ಮಾತಿನ ಯುದ್ಧ ಮುಗಿದು ಹೋಗಿದೆ.
ಕೆಆರ್ಎಸ್ ನಲ್ಲಿ ಯಾವುದೇ ಬಿರುಕು ಇಲ್ಲ ಎಂದು ವರದಿ ಹೇಳಿದೆ. ಅಂತಹ ಯಾವುದೇ ಸಂದರ್ಭ ಬಂದರೂ ಸರ್ಕಾರ ಬಗೆಹರಿಸುತ್ತದೆ ಹೇಳಿದ್ದಾರೆ.