ಕ್ರಿಕೆಟಿಗ ದೀಪಕ್ ಚಹಾರ್ ಅವರ ಪತ್ನಿಗೆ 10 ಲಕ್ಷ ರುಪಾಯಿ ವಂಚನೆ…
ಕ್ರಿಕೆಟಿಗ ದೀಪಕ್ ಚಹಾರ್ ಅವರ ಪತ್ನಿ ಜಯ ಭಾರದ್ವಾಜ್ ಅವರಿಗೆ ಉದ್ಯಮಿಯೊಬ್ಬ 10 ಲಕ್ಷ ರುಪಾಯಿ ವಂಚಿಸಿದ್ದಾರೆ. ಅಲ್ಲದೇ ಹಣವನವನ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಲಾಗಿದೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ ಮಾಜಿ ಪದಾಧಿಕಾರಿ ಹಾಗೂ ಅವರ ಪುತ್ರ, ಕ್ರಿಕೆಟಿಗ ದೀಪಕ್ ಚಾಹರ್ ಪುತ್ರಿಗೆ ಬೆದರಿಕೆ ಹಾಕಿದ್ದಾರೆ. ಇವರಿಬ್ಬರು ವ್ಯವಹಾರದ ಹೆಸರಿನಲ್ಲಿ ಜಯ ಭಾರಧ್ವಜ್ ಅವರಿಂದ 10 ಲಕ್ಷ ರೂ ಪಡೆದುಕೊಂಡಿದ್ದರು.
ವ್ಯಾಪಾರ ಆರಂಭಿಸದಿದ್ದಕ್ಕೆ ಜಯಾ ಹಣ ವಾಪಸ್ ಕೇಳಿದಾಗ ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ದೀಪಕ್ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಸಂಘದ ಮಾಜಿ ಪದಾಧಿಕಾರಿಗಳು, ತನಗೂ ಇದಕ್ಕೂ ಸಂಬಂಧವಿಲ್ಲ. ನಾವು ಹಣ ಪಡೆದಿಲ್ಲ ಇದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದ್ದೇವೆ ಎಂದು ತಿಳಿಸಿದ್ದಾರೆ.
ಕ್ರಿಕೆಟಿಗ ದೀಪಕ್ ಚಹಾರ್ ಅವರ ತಂದೆ ಲೋಕೇಂದ್ರ ಚಾಹರ್ ಆಗ್ರಾದ ಶಹಗಂಜ್ ಪೊಲೀಸ್ ಠಾಣೆಯ ಮಾನಸ ಸರೋವರ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಪಾರಿಖ್ ಸ್ಪೋರ್ಟ್ಸ್ & ಶಾಪ್ ಮಾಲೀಕ ಧ್ರುವ್ ಪಾರಿಖ್ ಅವರ ತಂದೆ ಕಮಲೇಶ್ ಪಾರಿಖ್ ಪಾದರಕ್ಷೆ ವ್ಯಾಪಾರ ಹೊಂದಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಇದರಲ್ಲಿ ಪಾಲುದಾರಿಕೆಗಾಗಿ ನನ್ನ ಸೊಸೆ ಜಯ ಭಾರದ್ವಾಜ್ ಆನ್‌ಲೈನ್ ಕಾನೂನು ಒಪ್ಪಂದ ಮಾಡಿಕೊಂಡಿದ್ದರು. 2022 ರ ಅಕ್ಟೋಬರ್ 7 ರಂದು ನೆಟ್ ಬ್ಯಾಂಕಿಂಗ್ ಮೂಲಕ ಆರೋಪಿಗಳಿಗೆ 10 ಲಕ್ಷ ರೂಪಾಯಿಗಳನ್ನು ನೀಡಲಾಗಿತ್ತು.
ಆರೋಪಿ ಕಮಲೇಶ್ ಪಾರಿಖ್ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯಲ್ಲಿ ರಾಜ್ಯ ಕ್ರಿಕೆಟ್ ತಂಡಗಳ ಮ್ಯಾನೇಜರ್ ಆಗಿದ್ದಾರೆ ಎಂದು ಲೋಕೇಂದ್ರ ಚಹಾರ್ ದೂರಿನಲ್ಲಿ ತಿಳಿಸಿದ್ದಾರೆ. ಪುತ್ರ ಧ್ರುವ್ ಪಾರಿಖ್ ಆಗ್ರಾದ ಎಂಜಿ ರಸ್ತೆಯಲ್ಲಿ ಪಾರಿಖ್ ಸ್ಪೋರ್ಟ್ಸ್ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ಹಣ ವಾಪಸ್ ಗೆ ಬೇಡಿಕೆಯಿಟ್ಟಿದ್ದಕ್ಕೆ ಆರೋಪಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ದೀಪಕ್ ಚಾಹರ್ ಅವರ ತಂದೆ ತಿಳಿಸಿದ್ದಾರೆ.
Deepak Chahar wife: Cricketer Deepak Chahar’s wife was cheated of 10 lakh rupees…