ಕಲ್ಕಿ 2898 AD ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಗರ್ಭಿಣಿ ದೀಪಿಕಾ ಪಡುಕೋಣೆ (Deepika Padukone) ಹೀಲ್ಸ್ ಹಾಕಿಕೊಂಡು ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
6 ತಿಂಗಳ ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಕಲ್ಕಿ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ಈಗಷ್ಟೇ ನಟಿ ಸಾಮಾಜಿಕ ಮಾಧ್ಯಮದಲ್ಲಿ ಬೇಬಿ ಬಂಪ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಬಾಡಿಕಾನ್ ಡ್ರೆಸ್ ನಲ್ಲಿ ಸಖತ್ ಆಗಿ ದೀಪಿಕಾ ಮಿಂಚಿದ್ದಾರೆ.
ದೀಪಿಕಾ ಪಡುಕೋಣೆ ಸಾಮಾಜಿಕ ಮಾಧ್ಯಮದಲ್ಲಿ, ‘ಇನ್ನು ಸಾಕು… ನನಗೆ ಈಗ ಹಸಿವಾಗಿದೆ’ ಎಂದು ಬರೆದಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆದಾರರು ಮತ್ತು ಅವರ ಸ್ನೇಹಿತರು ನಟಿಯ ಈ ಫೋಟೋಗಳಿಗೆ ಕಮೆಂಟ್ ಮೂಲಕ ಹಾರೈಸುತ್ತಿದ್ದಾರೆ.
ದೀಪಿಕಾ ಬೇಬಿ ಬಂಪ್ ಕಂಡು ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ಕಲ್ಕಿ ಕಾರ್ಯಕ್ರಮದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವರು ಭಾಗಿಯಾಗಿದ್ದರು.