ನಟ ಹೃತಿಕ್ ಹಾಗೂ ದೀಪಿಕಾ ಪಡುಕೋಣೆ ನಟಿಸಿರುವ ಫೈಟರ್ (Fighter) ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿಯೇ ಸೆನ್ಸಾರ್ ಮಂಡಳಿಯು ಚಿತ್ರದ ಎರಡು ದೃಶ್ಯಗಳನ್ನು ಕತ್ತರಿಸುವಂತೆ ಸೂಚಿಸಿದೆ ಎಂಬ ವಿಷಯ ಚರ್ಚಿತವಾಗುತ್ತಿದೆ.
ದೀಪಿಕಾ ಪಡುಕೋಣೆ ಬಿಕಿನಿ (Bikini) ಹಾಕಿದ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದರು. ಆಗ ಅದು ವಿವಾದಕ್ಕೆ ಕಾರಣವಾಗಿತ್ತು. ನಂತರ ಸಿನಿಮಾದಿಂದಲೇ ಆ ದೃಶ್ಯ ಕೈ ಬಿಡಲಾಗಿತ್ತು. ಫೈಟರ್ ಸಿನಿಮಾದಲ್ಲಿಯೂ ಬಿಕಿನಿಯಲ್ಲಿ ದೀಪಿಕಾ ಕಾಣಿಸುವುದಿಲ್ಲ ಎನ್ನಲಾಗುತ್ತಿದೆ.
ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಪಠಾಣ್’ಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡ್ತಿದ್ದಾರೆ. ಹೃತಿಕ್-ದೀಪಿಕಾ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಹೃತಿಕ್ ರೋಷನ್ (Hrithik Roshan) ನಟನೆಯ ‘ಫೈಟರ್’ ಸಿನಿಮಾದ ಬಜೆಟ್ 350 ಕೋಟಿ ರೂ. ತಲುಪಿದೆ. ಆದರೆ, ಮರಳಿ ಪಡೆಯುವುದು ಕಷ್ಟ ಎನ್ನಲಾಗುತ್ತಿದೆ. ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು 40 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹೃತಿಕ್ ರೋಷನ್ ಸಂಭಾವನೆ 85 ಕೋಟಿ ರೂ., ದೀಪಿಕಾ ಪಡುಕೋಣೆ 20 ಕೋಟಿ ರೂ, ಇನ್ನುಳಿದ ಕಲಾವಿದರಿಗೆ 15 ಕೋಟಿ ರೂ. ನೀಡಲಾಗಿದ್ದು, ಒಟ್ಟು ಸಂಭಾವನೆಯೇ 160 ಕೋಟಿ ರೂ. ದಾಟಿದೆ ಎನ್ನಲಾಗುತ್ತಿದೆ.