dehli
ತೀವ್ರ ಚಳಿ.. ಕೊರೊನಾ 2ನೇ ಅಲೆ..ವಾಯುಮಾಲಿನ್ಯಕ್ಕೆ ದೆಹಲಿ ತತ್ತರ..!
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೇಳಿ ಕೇಳಿ ವಾಯುಮಾಲಿನ್ಯ ದಾಖಲೆಯ ಮಟ್ಟದಲ್ಲಿದೆ. ಅದ್ರಲ್ಲೂ ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ಅಂತೂ ತುಂಬಾನೆ ಹೆಚ್ಚಾಗುತ್ತೆ. ಈ ಬಾರಿ ದೀಪಾವಳಿ ಮುಗಿದು ವಾರರ ಕಳೆದಿದೆ. ಆದ್ರೂ ವಾಯುಮಾಲಿನ್ಯ ಮಾತ್ರ ಕಡಿಮೆಯಾಗುವ ಲಕ್ಷಣಗಳೇ ಕಾಣ್ತಿಲ್ಲ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ಅನ್ವಯ ಸರಾಸರಿ 24 ಗಂಟೆಗಳ ವಾಯು ಗುಣಮಟ್ಟದ ಸೂಚ್ಯಂಕದ ಪ್ರಕಾರ ದೆಹಲಿ ವಿಶ್ವವಿದ್ಯಾಲಯ ಪ್ರದೇಶದಲ್ಲಿ 308. ನೋಯ್ಡಾ ಸುತ್ತಾ ಮುತ್ತಾ 317. ಪೂಸಾ ಪ್ರದೇಶದ ವ್ಯಾಪ್ತಿಯಲ್ಲಿ 286. ದೆಹಲಿ ಐಐಟಿ ಪ್ರದೇಶಗಳಲ್ಲಿ 252. ಗಾಳಿಯ ಗುಣಮಟ್ಟವು 301-400 ಅಂಕದ ನಡುವೆ ಇದೆ. ಇನ್ನೂ ಇದನ್ನ ಅತ್ಯಂತ ಕಳಪೆ ಎಂದು ವ್ಯಾಖ್ಯಾನಿಸಲಾಗುತ್ತಿರುವುದು ಅತತ್ಯಂತ ಆತಂಕಕಾರಿ ವಿಚಾರವಾಗಿದೆ. ಅಲ್ಲದೇ ತಜ್ಞರ ಪ್ರಕಾರ ಈ ಗಾಳಿ ಉಸಿರಾಡಲು ಸತ್ಯಂತ ಅನರ್ಹ ಹಾಗೂ ಹಾನಿಕಾರಕ ಎಂದು ವರ್ಣಿಸಲಾಗಿದೆ.
ದಕ್ಷಿಣ ಭಾರತದ ರಾಜ್ಯಗಳ ಮೇಲೆ ಅಪ್ಪಳಿಸಲಿದೆ ‘ನಿವಾರ್’ ಚಂಡಮಾರುತ
ಈ ಬಾರಿ ದೆಹಲಿಯಲ್ಲಿ ಬೆಳೆ ತ್ಯಾಜ್ಯ ಸುಡುವುದನ್ನು ನಿಲ್ಲಿಸಲಾಗಿದೆ. ಅದಕ್ಕೆ ಬದಲಾಗಿ ತಾಜ್ಯದ ಮೇಲೆ ಕೆಮಿಕಲ್ ಸಿಂಪಡಿಸಲಾಗಿದೆ. ಇದಲ್ಲದೆ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಇಷ್ಟೆಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೂ ದೀಪಾವಳಿ ಆಗಿ ವಾರ ಕಳೆದಿದ್ದರೂ ವಾಯುಮಾಲಿನ್ಯ ನಿಯಂತ್ರಣ ಆಗಿಲ್ಲದಿರುವುದರಿಂದ ಆತಂಕವನ್ನು ಸೃಷ್ಟಿಯಾಗಿದೆ.
dehli
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel