ದೆಹಲಿ ಕಾರು ಸ್ಫೋಟ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆ NIAಗೆ ಹಸ್ತಾಂತರಿಸಿದೆ. ಕೆಂಪುಕೋಟೆ ಸಮೀಪದ ಮೆಟ್ರೋ ರೈಲು ಗೇಟ್ ಬಳಿ ಸಂಭವಿಸಿದ ಸ್ಫೋಟವನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ಪೂರ್ಣ ತನಿಖೆ NIA ನೋಡಿಕೊಳ್ಳಲಿದೆ.
ಘಟನೆ ನಡೆದ ತಕ್ಷಣ ಶಂಕಿತರನ್ನು ಬಂಧಿಸಿ ಪ್ರಾಥಮಿಕ ವಿಚಾರಣೆ ನಡೆಸಲಾಗಿತ್ತು. ಈಗ NIA ಹಸ್ತಕ್ಷೇಪದಿಂದ ತನಿಖೆ ಇನ್ನಷ್ಟು ವೇಗ ಪಡೆಯಲಿದೆ ಎಂದು ಮೂಲಗಳು ಹೇಳಿವೆ. ಗೃಹ ಸಚಿವ ಅಮಿತ್ ಶಾ, ಈ ಕೃತ್ಯದ ಹಿಂದಿರುವವರನ್ನು ಖಚಿತವಾಗಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಯಾರನ್ನೂ ಬಿಡುವುದಿಲ್ಲ ಎಂದು ಖಡಕ್ ಹೇಳಿಕೆ ನೀಡಿದ್ದಾರೆ.
ಸ್ಫೋಟದ ನಂತರ ದೆಹಲಿಯಲ್ಲಷ್ಟೇ ಅಲ್ಲದೆ ದೇಶದ ಅನೇಕ ಮಹಾನಗರಗಳಲ್ಲಿ ಭದ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಕಟ್ಟೆಚ್ಚರ ವಹಿಸಲಾಗಿದೆ. ದೇಶದ ಭದ್ರತೆ ಕುರಿತು ಹಲವು ಸಂಸ್ಥೆಗಳು ಪರಸ್ಪರ ಸಂಯೋಜನೆ ಮಾಡಿಕೊಂಡು ಕೆಲಸ ಆರಂಭಿಸಿವೆ.






