ಮಾದಕ ವ್ಯಸನಕ್ಕೆ ಬಿದ್ದು ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ವ್ಯಕ್ತಿ…
ದೆಹಲಿಯ ಪಾಲಂ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರನ್ನ ಕೊಲೆ ಮಾಡಿರುವ ಘಟನೆ ನಡೆದಿದೆ. ಮಂಗಳವಾರ ರಾತ್ರಿ 10.30ಕ್ಕೆ ಈ ಘಟನೆ ನಡೆದಿದೆ. ಆರೋಪಿಯ ಹೆಸರು ಕೇಶವ ಎಂದು ಗುರುತಿಸಲಾಗಿದೆ.
ಆತ ಮಾದಕ ವ್ಯಸನಿಯಾಗಿದ್ದ, ಮನೆಯವರು ಆತನನ್ನು ವ್ಯಸನ ಮುಕ್ತ ಕೇಂದ್ರಕ್ಕೆ ಕಳುಹಿಸಿದ್ದಾರೆ. ಅಲ್ಲಿಂದ ಹಿಂತಿರುಗಿದ ನಂತರವ ಆತ ಚಟ ಬಿಟ್ಟಿರಲಿಲ್ಲ. ನಿತ್ಯ ಮಾದಕ ವ್ಯಸನಕ್ಕಾಗಿ ಹಣ ಪೀಡಿಸುತ್ತಿದ್ದ ಎನ್ನಲಾಗಿದೆ.
ಮಂಗಳವಾರ ಮಾದಕ ವಸ್ತುಗಳಿಗೆ ಹಣ ಕೇಳಿದ್ದಾಗ ಕುಟುಂಬ ಸದಸ್ಯರು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ. ಮನೆಯ ನಾಲ್ವರು ಸದಸ್ಯರನ್ನೂ ಬೇರೆ ಬೇರೆ ಕೋಣೆಗಳಿಗೆ ಕರೆದೊಯ್ದು ಹತ್ಯೆ ಮಾಡಲಾಗಿದೆ. ಕೊಲೆಯ ನಂತರ ಆರೋಪಿ ಪರಾರಿಯಾಗಿದ್ದರೂ ಆತನ ಸೋದರ ಸಂಬಂಧಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೃತರನ್ನು ತಂದೆ ದಿನೇಶ್, ತಾಯಿ ದರ್ಶನಾ, ಸಹೋದರಿ ಊರ್ವಶಿ ಮತ್ತು ಅಜ್ಜಿ ದೀವಾನಾ ದೇವಿ ಎಂದು ಗುರುತಿಸಲಾಗಿದೆ.
ಕೊಲೆ ಮಾಡಿದ ಪುತ್ರ ಕೇಶವನಿಗೆ ಭದ್ರವಾದ ಕೆಲಸ ಇರಲಿಲ್ಲ. ಗುರಗಾಂವ್ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದರು. ಅಂದಿನಿಂದ ಹಣದ ವಿಚಾರವಾಗಿ ಕುಟುಂಬ ಸದಸ್ಯರೊಂದಿಗೆ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪಾಲಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
Delhi Family Murder -Keshav Kills Mother, Father, Sister