Delhi liquor policy case: ED ಕಚೇರಿ ತಲುಪಿದ ತೆಲಂಗಾಣ ಸಿಎಂ ಪುತ್ರಿ ಕವಿತಾ; ಕೆಸಿಆರ್ ಗೆ ಬಂಧನ ಭೀತಿ…
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಪುತ್ರಿ ಕವಿತ ಇಡಿ ಕಚೇರಿ ತಲುಪಿದ್ದು, ಸಧ್ಯದಲ್ಲೇ ಇ ಡಿ ಅವರನ್ನ ವಿಚಾರಣೆಗೆ ಒಳಪಡಿಸಲಿದೆ. ಕವಿತಾ ಅವರನ್ನು ಬಂಧಿಸಬಹುದು ಎಂಬ ಆತಂಕದಲ್ಲಿ ಕೆಸಿಆರ್ ಅವರು ತಮ್ಮ ಪುತ್ರ ಕೆಟಿಆರ್ ಮತ್ತು ಟಿ ಹರೀಶ್ ರಾವ್ ಅವರನ್ನು ದೆಹಲಿಗೆ ಕಳುಹಿಸಿದ್ದಾರೆ.
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕವಿತಾ ಆರೋಪಿಸಿದ್ದಾರೆ. ಎಲ್ಲಿ ಚುನಾವಣೆಗಳು ನಡೆಯುತ್ತವೆಯೋ ಅಲ್ಲಿಗೆ ಜಾರಿ ನಿರ್ದೇಶನಾಲಯ (ಇಡಿ) ಮೋದಿಗಿಂತ ಮುಂಚೆಯೇ ತಲುಪುತ್ತದೆ ಎಂದು ಹೇಳಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಕವಿತಾ ಹೇಳಿದ್ದಾರೆ. ಇದಕ್ಕೂ ಮೊದಲು ಡಿಸೆಂಬರ್ 12, 2022 ರಂದು ಕವಿತಾ ಅವರನ್ನ ಸಿಬಿಐ ಹೈದರಾಬಾದ್‌ನಲ್ಲಿ ಸುಮಾರು 7 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.
ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಹೈದರಾಬಾದ್‌ನಲ್ಲಿರುವ ಕೆಸಿಆರ್ ಅವರ ಮನೆಯ ಹೊರಗೆ ಜಮಾಯಿಸಲು ಪ್ರಾರಂಭಿಸಿದ್ದಾರೆ.
ಕವಿತಾ ಅವರ ಆಪ್ತ ಸಹಾಯಕ ಇಡಿ ವಶದಲ್ಲಿ…
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮನಿ ಲಾಂಡರಿಂಗ್ ದೂರುಗಳ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಮಂಗಳವಾರ ದೆಹಲಿ ನ್ಯಾಯಾಲಯವು ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಅವರನ್ನು ಮಾರ್ಚ್ 13 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲು ಆದೇಶಿಸಿದೆ. ಅರುಣ್ ಕೆ ಕವಿತಾ ಅವರಿಗೆ ಆಪ್ತರು. ಪಿಳ್ಳೈ ಅವರು ಆಮ್ ಆದ್ಮಿ ಪಕ್ಷಕ್ಕೆ ಮದ್ಯದ ನೀತಿ ಬದಲಾವಣೆಗಾಗಿ 100 ಕೋಟಿ ರೂ.ಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಬಂಧನ
ದೆಹಲಿ ಸರ್ಕಾರದ ಅಬಕಾರಿ ಖಾತೆ ಸಚಿವ ಮನೀಶ್ ಸಿಸೋಡಿಯಾ ಅವರು ಮದ್ಯ ನೀತಿಗೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿದ್ದಾರೆ. ಸುಮಾರು 8 ಗಂಟೆಗಳ ವಿಚಾರಣೆಯ ನಂತರ ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಸದ್ಯ ಅವರು ತಿಹಾರ್ ಜೈಲಿನಲ್ಲಿದ್ದು, ಮಂಗಳವಾರ ಇಡಿ ಜೈಲಿನಲ್ಲಿಯೇ ವಿಚಾರಣೆ ನಡೆಸಿದೆ.
Delhi liquor policy case: BRS leader Kavitha to appear before ED today