ಗಂಡ-ಹೆಂಡತಿಯರ ಜಗಳದ ನಡುವೆ ಮಗು ಬಲಿಯಾಯಿತು
ನವದೆಹಲಿ: ಗಂಡ-ಹೆಂಡತಿ ಜಗಳದ ನಡುವೆ, ಮಗು ಬಲಿಯಾಗಿರುವ ಘಟನೆ ದೆಹಲಿಯ ಹೈದರ್ಪುರ ಪ್ರದೇಶದಲ್ಲಿ ನಡೆದಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಗಂಡ – ಹೆಂಡತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಸುಖಿ ಸಂಸಾರದ ಪ್ರತೀಕವೆಂಬಂತೆ ಮೂರು ತಿಂಗಳ ಹಿಂದೆ ಮುದ್ದಾದ ಹೆಣ್ಣಮಗು ಜನಿಸಿದೆ. ಆದರೆ ದಿನ ಕಳೆದಂತೆ ಇಬ್ಬರ ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗುತ್ತಿತ್ತು.
ಗುರುವಾರ ಸಹ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಪತಿ ಸಂಚಿತ್ ಕೆಲಸಕ್ಕೆಂದು ಹೊರಗಡೆ ಹೋಗಿದ್ದಾನೆ. ಇದೇ ಸಂದರ್ಭದಲ್ಲಿ ಪತ್ನಿ ತನ್ನ ಮೂರು ತಿಂಗಳ ಮಗುವಿನ ಕೊಲೆ ಮಾಡಿದ್ದಾಳೆ.
ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕಾಗಮಿಸಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ, ಈಗಾಗಲೇ ಅಂತ್ಯಕ್ರಿಯೆ ನಡೆಸಲಾಗಿದ್ದು, ಗಂಡ-ಹೆಂಡತಿಯನ್ನ ವಶಕ್ಕೆ ಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ. ಪತಿ ಬಡಗಿಯಾಗಿದ್ದು, ಕಳೆದ ಕೆಲ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರು ಮೇಲಿಂದ ಮೇಲೆ ಜಗಳ ಮಾಡ್ತಿದ್ದ ಕಾರಣ ಮನೆ ಖಾಲಿ ಮಾಡುವಂತೆ ಮಾಲೀಕರು ಸೂಚನೆ ಸಹ ನೀಡಿದ್ದರು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ.