Dehli | ರಾಷ್ಟ್ರ ರಾಜಧಾನಿಯಲ್ಲಿ ಭಯಾನಕ ಘಟನೆ
25 ವರ್ಷದ ಯುವಕನ ಬರ್ಬರ ಕೊಲೆ.
ಆರು ಬಾರಿ ಚಾಕುವಿನಿಂದ ಇರಿದು ಕೊಲೆ,
ಮನೀಶ್ ಕೊಲೆಯಾದ ಯುವಕ.
ದೃಶ್ಯವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ
ನವದೆಹಲಿ : ಮೂವರು ದುಷ್ಕರ್ಮಿಗಳು ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಇದರ ದೃಶ್ಯಾವಳಿಗಳು ಸಿಸಿ ಟಿ ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈಶಾನ್ಯ ದೆಹಲಿಯ ಸುಂದರ್ ನಗರದ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ.
ಕೊಲೆಯಾದ ಯುವಕನನ್ನು ಮನೀಶ್ ಎಂದು ಗುರುತಿಸಲಾಗಿದೆ.

ಮೊಹ್ಮದ್ ಅಲಂ, ಮೊಹ್ಮದ್ ಬಿಲಾಲ್, ಮೊಹ್ಮದ್ ಫೈಜನ್ ಕೊಲೆ ಆರೋಪಿಗಳಾಗಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾರೆ.
ಈ ಮೂವರ ಮನೀಶ್ ನನ್ನು ಸುತ್ತುವರೆದು ಥಳಿಸಿದ್ದು ಮಾತ್ರವಲ್ಲದೇ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾರೆ.
ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಮನೀಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆದ್ರೆ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು.
ಇನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.
Delhi Murder